HEALTH TIPS

ಭಯೋತ್ಪಾದನೆ ಮಣಿಸಲು ರಾಷ್ಟ್ರೀಯ ಏಕತೆ ಇರಲಿ: ರಾಹುಲ್‌ ಗಾಂಧಿ ಕರೆ

ಶ್ರೀನಗರ: 'ಭಯೋತ್ಪಾದನೆಯನ್ನು ನಿರ್ಣಾಯಕವಾಗಿ ಎದುರಿಸಲು ರಾಷ್ಟ್ರೀಯ ಏಕತೆ ಪ್ರದರ್ಶಿಸಬೇಕು' ಎಂದು ಕಾಂಗ್ರೆಸ್‌ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ. ಇತ್ತೀಚಿಗಿನ ಭಯೋತ್ಪಾದಕ ದಾಳಿ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಶ್ರೀನಗರಕ್ಕೆ ಶುಕ್ರವಾರ ಬಂದಿಳಿದ ಅವರು, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಧೈರ್ಯ ತುಂಬಿದರು.

'ಒಂದು ರಾಷ್ಟ್ರವಾಗಿ ಭಯೋತ್ಪಾದನೆಯನ್ನು ಒಗ್ಗಟ್ಟಿನಿಂದ ಸೋಲಿಸುವುದು ಅತ್ಯಗತ್ಯ. ಈಗ ವಿಭಜಿಸುವ ಸಮಯವಲ್ಲ, ಒಗ್ಗಟ್ಟಿನಿಂದ ಹೋರಾಡುವುದು ಮುಖ್ಯ' ಎಂದು ತಿಳಿಸಿದರು.

ದೇಶದ ವಿವಿಧ ಭಾಗಗಳಲ್ಲಿ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಇದಾದ ಬಳಿಕ, ಕಾಶ್ಮೀರದ ಈಗಿನ ಸ್ಥಿತಿಗತಿ ಕುರಿತಂತೆ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರ ಜೊತೆಗೂ ಮಾತುಕತೆ ನಡೆಸಿದರು.

'ಈಗಿನ ಪರಿಸ್ಥಿತಿ ಎದುರಿಸಲು ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಂಡರೂ, ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡಲಿದೆ' ಎಂದು ಭರವಸೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries