ತಿರುವನಂತಪುರಂ: ಕೇರಳವನ್ನು ಮದ್ಯದಲ್ಲಿ ಮುಳುಗಿಸಲು, ಈವರೆಗಿನ ಡ್ರೈಡೇ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬಿವರೇಜ್ ಕಾರ್ಪೋರೇµನ್ ಸಿದ್ಧತೆ ನಡೆಸುತ್ತಿದೆ!
ಹೌದು, ನಿಗಮವು ತನ್ನ ಸಿಎಸ್‍ಆರ್ ನಿಧಿಯ 25 ಪ್ರತಿಶತವನ್ನು ಸರ್ಕಾರದ ಮಾದಕವಸ್ತು ಮುಕ್ತ ಚಟುವಟಿಕೆಗಳಿಗೆ ಕೊಡುಗೆ ನೀಡಲಿದೆ. ಇದನ್ನು ಸ್ವತಃ ಅಬಕಾರಿ ಸಚಿವರೇ ಹೇಳಿದ್ದಾರೆ. ಈ ವರ್ಷದ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮಗಳನ್ನು ಸಚಿವರು ಘೋಷಿಸಿದ್ದಾರೆ. ಅದೇ ರೀತಿ, ಹೆಚ್ಚಿನ ಜನರನ್ನು ಆಕರ್ಷಿಸಲು ರಾಜ್ಯದಲ್ಲಿ ಕಳ್ಳಭಟ್ಟಿ ಅಂಗಡಿಗಳ ಜೊತೆಗೆ ರೆಸ್ಟೋರೆಂಟ್‍ಗಳನ್ನು ತೆರೆಯಲಾಗುವುದು ಎಂದು ಸಚಿವರು ಬಹಿರಂಗಪಡಿಸಿದರು. ಕಳ್ಳಿನ ಅಂಗಡಿಗಳನ್ನು ಕುಟುಂಬಗಳು ಒಟ್ಟಿಗೆ ಸೇರುವ ಸ್ಥಳಗಳನ್ನಾಗಿ ಪರಿವರ್ತಿಸುವುದು ಗುರಿಯಾಗಿದೆ!
ಕಳೆದ ಹಣಕಾಸು ವರ್ಷದಲ್ಲಿ, ಬಿವರೇಜ್ ನಿಗಮದ ಮೂಲಕ ಕೇರಳದಲ್ಲಿ 228.60 ಲಕ್ಷ ಕೇಸ್‍ಗಳ(ಬಾಕ್ಸ್) ಭಾರತೀಯ ನಿರ್ಮಿತ ವಿದೇಶಿ ಮದ್ಯ ಮತ್ತು 101.81 ಲಕ್ಷ ಕೇಸ್‍ಗಳ ಬಿಯರ್ ಮಾರಾಟವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಿಯರ್ ಮಾರಾಟ ಕಡಿಮೆಯಾದರೆ, ವಿದೇಶಿ ಮದ್ಯ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಮದ್ಯವ್ಯಸನಿಗಳು ಹಂತ ಹಂತವಾಗಿ ಪ್ರಗತಿ ಹೊಂದುತ್ತಿದ್ದಾರೆ ಅಷ್ಟೇ.


