ಕಾಸರಗೋಡು: ಕೇರಳ ರಾಜ್ಯ ತ್ಯಾಜ್ಯ ನಿಯಂತ್ರಣ ಮಂಡಳಿಯ ಕಾಸರಗೋಡು ಜಿಲ್ಲಾ ಕಚೇರಿಗೆ ಪೆÇೀಸ್ಟ್ ಗ್ರಾಜ್ಯುಯೇಟ್ ಸೈಂಟಿಫಿಕ್ ಅಪ್ರೆಂಟಿಸ್ ಹುದ್ದೆಯ ನೇಮಕಾತಿ ನಡೆಸಲಾಗುವುದು. ಎಂ.ಎಸ್.ಸಿ (ರಸಾಯನಶಾಸ್ತ್ರ,ಸೂಕ್ಷ್ಮ ಜೀವವಿಜ್ಞಾನ, ಪರಿಸರ ವಿಜ್ಞಾನ-ಶೇ. 50 ಅಂಕಗಳೊಂದಿಗೆ) ಅರ್ಹತೆಯಾಗಿದೆ.
ತೆರವಾಗಿರುವ ಒಂದು ಹುದ್ದೆಗೆ ಒಂದು ವರ್ಷ ಕಾಲಾವಧಿಗೆ ನೇಮಕಾತಿ ನಡೆಯಲಿದ್ದು, ಮಾಸಿಕ 10000 ರೂ. ಗೌರವಧನ ನೀಡಲಾಗುವುದು. ವಯಸ್ಸಿನ ಮಿತಿ 28 ವರ್ಷಗಳಾಗಿದೆ. ಅರ್ಹ ಉದ್ಯೋಗಾರ್ಥಿಗಳು ಎಪ್ರಿಲ್ 23ರಂದು ಬೆಳಗ್ಗೆ 11ಕ್ಕೆ ಕಾಂಞಂಗಾಡು ರೈಲು ನಿಲ್ದಾಣದಲ್ಲಿರುವ ಕೇರಳ ರಾಜ್ಯ ತ್ಯಾಜ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಚೇರಿಯಲ್ಲಿ ಸಂಬಂಧಿತ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕು. ಈ ಹಿಂದೆ ಮಂಡಳಿಯಲ್ಲಿ ಪೆÇೀಸ್ಟ್ ಗ್ರಾಜ್ಯುಯೇಟ್ ಸೈಂಟಿಫಿಕ್ ಅಪ್ರೆಂಟಿಸ್‍ಗಳಾಗಿ ಸೇವೆ ಸಲ್ಲಿಸಿದವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ(0467 2201180)ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




