ತಿರುವನಂತಪುರಂ: ಐಪಿಎಸ್ ಅಧಿಕಾರಿಗಳ ಕರ್ತವ್ಯದಲ್ಲಿ ಬದಲಾವಣೆ ತರಲಾಗಿದೆ. ಎರ್ನಾಕುಳಂ ಗ್ರಾಮೀಣ ಎಸ್ಪಿ ವೈಭವ್ ಸಕ್ಸೇನಾ ಅವರು ಎನ್.ಐ.ಎ ಎಸ್ಪಿಯಾಗಿ ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ವೈಭವ್ ಸಕ್ಸೇನಾ ಅವರಿಗೆ ತಮ್ಮ ಹೊಸ ಹುದ್ದೆಯನ್ನು ತಕ್ಷಣವೇ ವಹಿಸಿಕೊಳ್ಳುವಂತೆ ನಿರ್ದೇಶಿಸಿದೆ. ವೈಭವ್ ಸಕ್ಸೇನಾ ಅವರನ್ನು ಐದು ವರ್ಷಗಳ ಅವಧಿಗೆ ಡೆಪ್ಯುಟೇಶನ್ ಮೇಲೆ ಎನ್.ಐ.ಎ.ಗೆ ನೇಮಿಸಲಾಗಿದೆ.
ರಾಜ್ಯ ಕ್ಷಿಪ್ರ ಕಾರ್ಯಪಡೆಯ ಕಮಾಂಡೆಂಟ್ ಹೇಮಲತಾ ಅವರು ಎರ್ನಾಕುಳಂ ಗ್ರಾಮೀಣ ವಿಭಾಗದ ಹೊಸ ಎಸ್ಪಿಯಾಗಲಿದ್ದಾರೆ. ತಿರುವನಂತಪುರಂ ನಗರ ಡಿಸಿಪಿ ವಿಜಯಭಾರತ್ ರೆಡ್ಡಿ ಅವರನ್ನು ಕಾಸರಗೋಡು ಎಸ್ಪಿಯಾಗಿ ನೇಮಿಸಲಾಗಿದೆ. ಟಿ ಫರಾಶ್ ಅವರು ತಿರುವನಂತಪುರಂ ಡಿಸಿಪಿಯಾಗಿರಲಿದ್ದಾರೆ. ಪೋಲೀಸ್ ಟೆಲಿಕಾಂ ವಿಂಗ್ ಎಸ್‍ಪಿ ದೀಪಕ್ ಧಂಕರ್ ಅವರನ್ನು ಫರಾಶ್ ಬದಲಿಗೆ ವಿಶೇಷ ಕಾರ್ಯಾಚರಣೆ ಗುಂಪಿನ ಎಸ್‍ಪಿಯಾಗಿ ನೇಮಿಸಲಾಗಿದೆ.





