HEALTH TIPS

ಈ ದಿನಾಂಕದಿಂದ ಭಕ್ತಾದಿಗಳಿಗೆ ಕೇದಾರನಾಥ, ಬದ್ರಿನಾಥ ಯಾತ್ರಾ ಸ್ಥಳಗಳು ಪುನಾರಂಭ

ಉತ್ತರಾಖಂಡ :ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಕೇದಾರನಾಥ್ ಹಾಗೂ ಬದ್ರಿನಾಥ್ ಧಾಮಗಳು ಯಾತ್ರಿಕರಿಗಾಗಿ ಪುನಃ ತೆರೆಯಲಾಗುತ್ತಿದೆ.

ಮೇ 2 ರಂದು ಕೇದಾರನಾಥ್ ಧಾಮ ಭಕ್ತಾದಿಗಳಿಗೆ ತೆರೆಯಲಿದೆ. ಮೇ 4 ರಂದು ಬದ್ರಿನಾಥ್ ಧಾಮ ಭಕ್ತಾದಿಗಳಿಗೆ ತೆರೆಯಲಿದೆ ಎಂದು ಶ್ರೀ ಬದ್ರಿನಾಥ್ ಕೇದಾರನಾಥ್ ದೇವಸ್ಥಾನ ಸಮಿತಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಹವಾಮಾನ ವೈಪರಿತ್ಯದಿಂದ ಭಕ್ತಾದಿಗಳಿಗೆ ತೊಂದರೆ ಆಗಬಾರದೆಂದು ಈ ಧಾಮಗಳನ್ನು ನವೆಂಬರ್‌ನಿಂದ ಏಪ್ರಿಲ್‌ವರೆಗೆ ಮುಚ್ಚಲಾಗಿರುತ್ತದೆ.

ಚಾರ್‌ಧಾಮ ಯಾತ್ರೆ ಎಂದು ಪ್ರಸಿದ್ಧವಾಗಿರುವ ಕೇದಾರನಾಥ್, ಬದ್ರಿನಾಥ್, ಗಂಗೋತ್ರಿ, ಯಮನೋತ್ರಿ ಯಾತ್ರೆಗಳು ಉತ್ತರ ಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries