HEALTH TIPS

ಶ್ರೀ ನಾರಾಯಣ ಗುರುಗಳ ತತ್ವಶಾಸ್ತ್ರ ಸರ್ಟಿಫಿಕೇಟ್ ಕೋರ್ಸ್‍ನಲ್ಲಿ ರ್ಯಾಂಕ್

ಕಾಸರಗೋಡು : ಮುಂಬಯಿ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಶ್ರೀ ನಾರಾಯಣ ಗುರುಗಳ ತತ್ವಶಾಸ್ತ್ರ 2023-2024ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಲಾದ ಸರ್ಟಿಫಿಕೇಟು ಕೋರ್ಸ್ ಪರೀಕ್ಷೆ ಯಲ್ಲಿ ಮುಂಬೈ ತುಳು-ಕನ್ನಡಿಗ ಹಿರಿಯ ಸಮಾಜ ಸೇವಕ ಜಗನ್ನಾಥ ಮದನ್ ಅಮೀನ್  ಪ್ರಥಮ ರ್ಯಾಂಕ್ ಹಾಗೂ ಡಿಪೆÇ್ಲೀಮಾ ಕೋರ್ಸ್‍ನಲ್ಲಿ ದ್ವಿತೀಯ ರ್ಯಾಂಕ್  ಪಡೆದುಕೊಂಡಿದ್ದಾರೆ.

ಸಾಂತಾಕ್ರೂಜ್ ಪೂರ್ವದ ಕಲೀನಾ  ವಿದ್ಯಾನಗರಿಯ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ  ನಡೆದ ವಿಚಾರ ಸಂಕಿರಣದಲ್ಲಿ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಎಂ.ವೈದ್ಯ ಮತ್ತು ಶ್ರೀ ನಾರಾಯಣ ಗುರುಗಳ ತತ್ರಶಾಸ್ತ್ರ ಸರ್ಟಿಫಿಕೇಟು ಕೋರ್ಸ್‍ನ ಸಮನ್ವಯಕ ಡಾ. ನಾರಾಯಣ್ ಶಂಕರ್ ಗಡಾದ ಅವರು ಜಗನ್ನಾಥ್ ಅವಿನ್ ಅವರಿಗೆ ಪ್ರಶಸ್ತಿ, ಮಾನ್ಯತಾಪತ್ರ ಮತ್ತು ಅಂಕಪಟ್ಟಿ ಪ್ರದಾನ ಮಾಡಿದರು.

ಕಾಸರಗೋಡು ಜಿಲ್ಲೆಯ ಉಪ್ಪಳ ಕೊಂಡೆವೂರು ನಿವಾಸಿ ಮದನ ಪೂಜಾರಿ-ಲಕ್ಷ್ಮೀ ಪೂಜಾರ್ತಿ ದಂಪತಿ ಪುತ್ರ ಜಗನ್ನಾಥ್ ಅಮೀನ್ ಉಪ್ಪಳದಲ್ಲಿ ಬಾಲ್ಯ ಶಿಕ್ಷಣ ಪೂರೈಸಿ 1960ರಲ್ಲಿ  ಮುಂಬಯಿಗೆ ತೆರಳಿ, ಅಲ್ಲಿ ಕನ್ನಡ ರಾತ್ರಿ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದರು.  ಸುಮಾರು ಐದು ದಶಕಗಳಿಂದ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ಪ್ರಶಾಂತಿ ನಿಲಯ ಆಶ್ರಮದಲ್ಲಿ  ಅರೆಕಾಲಿಕವಾಗಿ ಸೇವಾ ನಿರತರಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries