ಕಾಸರಗೋಡು: ಸಾಂಸ್ಕøತಿಕ ಹಾಗೂ ಸಾಹಿತ್ಯಿಕವಾಗಿ ಸಂಪತ್ಭರಿತವಾಗಿರುವ ಕಾಸರಗೋಡಿನ ಪುಣ್ಯ ನೆಲದಲ್ಲಿ ಆತ್ಮೀಯ ರಂಗಭೂಮಿಯ ಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವ ಜ್ಯೋತಿಶ್ರೀ ಟ್ರಸ್ಟ್ ಗಡಿನಾಡಿನ ಸಾಂಸ್ಕ್ರತಿಕ ರಂಗಕ್ಕೆ ಹೊಸ ಆಯಾಮ ತಂದುಕೊಡಲಿರುವುದಾಗಿ ಜೋತಿಶ್ರೀ ಟ್ರಸ್ಟ್ ಅಧ್ಯಕ್ಷೆ ಜ್ಯೋತಿಪ್ರಭಾ ರಾವ್ ತಿಳಿಸಿದ್ದಾರೆ.
ಅವರು ಕಾಸರಗೋಡಿನ ಶಾಂತ ದುಗಾರ್ಂಬಾ ರಸ್ತೆಯಲ್ಲಿರುವ 'ಬನಶಂಕರಿ'ವಠಾರದಲ್ಲಿ ನಿರ್ಮಿಸಲಾದ 'ಜ್ಯೋತಿಶ್ರೀ' ಅಂತರಂಗ ರಂಗವೇದಿಕೆ ಹಾಗೂ ಜೋತಿಶ್ರೀ ಟ್ರಸ್ಟ್‍ಗೆ ಚಾಲನೆ ನೀಡಿ, ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ರಂಗ ನಿರ್ದೇಶಕರು, ಚಲನಚಿತ್ರ ನಟರು, ಟ್ರಸ್ಟಿನ ಉಪಾಧ್ಯಕ್ಷರು ಆಗಿರುವ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ "ತಂದೆ ತಾಯಿಯವರ ಹೆಸರಲ್ಲಿ 'ಆತ್ಮೀಯ ರಂಗಭೂಮಿ'ಯ ಕಲ್ಪನೆಯೊಂದಿಗೆ ಕಾಸರಗೋಡಿನಲ್ಲಿ ಪ್ರಪ್ರಥಮವಾಗಿ ನಿರ್ಮಿಸಿದ 'ಜ್ಯೋತಿಶ್ರೀ ಅಂತರಂಗ' ಹೊಸ ಪೀಳಿಗೆಯ ಕಲಾವಿದರಿಗೆ ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಲಾವಿದ ಸಂಗೀತ ಗುರುಗಳು ಆಗಿರುವ ಶ್ರೀ ವಿಶ್ವಾಸ್ ಕೃಷ್ಣ, ಚಲನಚಿತ್ರ ನಟರಾದ ಕೆ. ಎಸ್. ಶ್ರೀಧರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕುಮಾರಿಯರಾದ ಶ್ರೀರಕ್ಷಾ, ಶ್ರೇಯ, ರಚನಾ ಪ್ರಾರ್ಥನೆ ಹಾಡಿದರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಖ್ಯಾತ ವೈದ್ಯರಾದ ಡಾ.ಸುಧೇಶ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ ಸಹ ಕಾರ್ಯದರ್ಶಿ ಡಾ. ಸುಮಾ ಕಾಮತ್ ವಂದಿಸಿದರು.





