ಟ್ರೂಕಾಲರ್‍ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ನಿಮ್ಮ ಪೋನ್‍ನಲ್ಲಿ ಯಾವುದೇ ಕರೆ ಮಾಡಿದವರ ಹೆಸರನ್ನು ಡೌನ್‍ಲೋಡ್ ಮಾಡದೆಯೇ ತೋರಿಸುತ್ತದೆ. ಇನ್ನು ಮುಂದೆ, ಪೋನ್‍ನಲ್ಲಿ ಅಪರಿಚಿತ ಸಂಖ್ಯೆಗಳ ಹೆಸರು ಕಾಣಿಸಿಕೊಳ್ಳಲಿದೆ. .
ಫೆಬ್ರವರಿ 2024 ರಲ್ಲಿ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಎಲ್ಲಾ ಸ್ಮಾರ್ಟ್ ಪೋನ್‍ಗಳಲ್ಲಿ ಸಿಎನ್,ಎ.ಪಿ ಅನ್ನು ಅಳವಡಿಸಲು ಶಿಫಾರಸು ಮಾಡಿತ್ತು. ಇದಲ್ಲದೆ, ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಇದನ್ನು ಕಡ್ಡಾಯಗೊಳಿಸುವಂತೆ ಟ್ರಾಯ್ ಸರ್ಕಾರವನ್ನು ಕೇಳಿತ್ತು.
ಸಿಎನ್.ಎ.ಪಿ. ಅನುಷ್ಠಾನದಿಂದ, ಗ್ರಾಹಕರು ಸ್ಪ್ಯಾಮ್ ಕರೆಗಳ ತೊಂದರೆಯಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಇದು ಗ್ರಾಹಕರಿಗೆ ಪ್ರಮುಖ ಕರೆಗಳನ್ನು ಗುರುತಿಸಲು ಕೂಡಾ ನೆರವಾಗುತ್ತದೆ.
ಈ ಸೇವೆಯು ಟ್ರೂಕಾಲರ್‍ನಂತೆಯೇ ಕಾರ್ಯನಿರ್ವಹಿಸುತ್ತದೆ. ಇದು ಮೊಬೈಲ್ ಪರದೆಯ ಮೇಲೆ ಕರೆ ಮಾಡಿದವರ ಹೆಸರನ್ನು ತೋರಿಸುವ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಪೋನ್‍ನಲ್ಲಿ ಸಿಎನ್.ಎ.ಪಿ ಯನ್ನು ಅಳವಡಿಸಿದಾಗ, ಟೆಲಿಕಾಂ ಕಂಪನಿಯಲ್ಲಿ ನೋಂದಾಯಿಸಲಾದ ಬಳಕೆದಾರರ ಹೆಸರು ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಆರಂಭದಲ್ಲಿ, ಒಂದೇ ಕಂಪನಿಯಲ್ಲಿರುವ ಬಳಕೆದಾರರ ಹೆಸರುಗಳು ಮಾತ್ರ ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಒಬ್ಬ ಜಿಯೋ ಬಳಕೆದಾರರು ಇನ್ನೊಬ್ಬ ಜಿಯೋ ಬಳಕೆದಾರರಿಂದ ಕರೆ ಸ್ವೀಕರಿಸಿದರೆ, ಅವರ ಹೆಸರು ಕಾಣಿಸಿಕೊಳ್ಳುತ್ತದೆ. ಯಾವುದೇ ಏರ್‍ಟೆಲ್ ಬಳಕೆದಾರರು ಅವರಿಗೆ ಕರೆ ಮಾಡಿದರೆ, ಅವರ ಹೆಸರು ಪರದೆಯ ಮೇಲೆ ಕಾಣಿಸುವುದಿಲ್ಲ. ಏಕೆಂದರೆ ಸರ್ಕಾರವು ದೂರಸಂಪರ್ಕ ಕಂಪನಿಗಳ ನಡುವೆ ಗ್ರಾಹಕರ ಡೇಟಾವನ್ನು ಹಂಚಿಕೊಳ್ಳಲು ಇನ್ನೂ ಅವಕಾಶ ನೀಡಿಲ್ಲ.





