HEALTH TIPS

ಟರ್ಕಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪ್ರಯಾಣಿಕರು

ಮುಂಬೈ: ವರ್ಜಿನ್‌ ಅಟ್ಲಾಂಟಿಕ್‌ ವಿಮಾನದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷದಿಂದಾಗಿ 250ಕ್ಕೂ ಹೆಚ್ಚು ಪ್ರಯಾಣಿಕರು ಟರ್ಕಿಯ ದಿಯರ್‌ಬಕಿರ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

ಇವರಲ್ಲಿ ಭಾರತದ ಪ್ರಯಾಣಿಕರು ಇದ್ದು, 40 ಗಂಟೆ ನಿಲ್ದಾಣದಲ್ಲಿಯೇ ಕಳೆದಿದ್ದಾರೆ.

ಈ ವಿಮಾನವು ಲಂಡನ್‌ನ ಹೀಥ್ರೂ ನಿಲ್ದಾಣದಿಂದ ಮುಂಬೈಗೆ ಬರುತ್ತಿತ್ತು. ವೈದ್ಯಕೀಯ ತುರ್ತು ಕಾರಣಕ್ಕೆ ಟರ್ಕಿಯಲ್ಲಿ ಇಳಿದಿದೆ. ಆ ಬಳಿಕ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹಾರಾಟಕ್ಕೆ ಅನುಮತಿ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ತಾಂತ್ರಿಕ ಪರಿಣತರ ತಂಡವು ಸಮಸ್ಯೆ ಬಗೆಹರಿಸಲು ಕಾರ್ಯನಿರತವಾಗಿದೆ ಎಂದು ಕಂಪನಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries