ಬದಿಯಡ್ಕ: ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿ ವಾಂತಿಚ್ಚಾಲು ಇಲ್ಲಿ ಪ್ರಾರ್ಥನಾ ಕೋಲ ಭಾನುವಾರ ಜರಗಿತು. ಬೆಳಗ್ಗೆ ದೀಪಪ್ರತಿಷ್ಠೆ, ಭಂಡಾರ ಇಳಿಯುವುದು, ಗಣಪತಿ ಹೋಮ, ಕ್ಷೀರಾಭಿಷೇಕ, ಸೀಯಾಳಾಭಿಷೇಕ, ವಿಶೇಷ ಅಲಂಕಾರ ತಂಬಿಲಸೇವೆ, ಮಾ. ಪವಿತ್ ಮಂಡೆಕಾಪು ಸೇವೆಯಲ್ಲಿ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ಜರಗಿತು. ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ದೈವದ ಪ್ರಾರ್ಥನೆ ನೆರವೇರಿಸಿದರು. ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಉದ್ಯಮಿ ಶಿವಶಂಕರ ನೆಕ್ರಾಜೆ, ಮಹೇಶ್ ವಳಕ್ಕುಂಜ, ಡಾ. ಶ್ರೀನಿಧಿ ಸರಳಾಯ, ಗಣ್ಯರು, ಭಗವದ್ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




.jpg)
