ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಿಂದ ಪಾಕಿಸ್ತಾನದ ನಾಗರಿಕರನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತಪಟ್ಟ ಶೌರ್ಯ ಚಕ್ರ ಪುರಸ್ಕೃತ ವ್ಯಕ್ತಿಯ ತಾಯಿ ಸೇರಿ 60 ಪಾಕಿಸ್ತಾನಿಗಳನ್ನು ಅಧಿಕಾರಿಗಳು ಗಡೀಪಾರು ಮಾಡಿದ್ದಾರೆ.
ವಿವಿಧ ಜಿಲ್ಲೆಗಳಿಂದ ಪಾಕಿಸ್ತಾನದ ನಾಗರಿಕರನ್ನು ಪಂಜಾಬ್‌ನ ವಾಘಾ ಗಡಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಕೇಂದ್ರ ಸರ್ಕಾರ ಅಲ್ಪಾವಧಿಯ ವೀಸಾ ಹೊಂದಿರವ ಪಾಕಿಸ್ತಾನಿಯರು ಏ.27ರ ಒಳಗೆ ಭಾರತ ತೊರೆಯಲು ಆದೇಶಿಸಿತ್ತು. ಅದರಂತೆ ವಾಘಾ ಗಡಿಯ ಮೂಲಕ ಪಾಕ್ ಪ್ರಜೆಗಳು ಭಾರತ ಬಿಟ್ಟು ಸ್ವದೇಶಕ್ಕೆ ತೆರಳುತ್ತಿದ್ದಾರೆ.
ಗಡೀಪಾರಾದ 60 ಜನರಲ್ಲಿ ಮಾಜಿ ಉಗ್ರರ ಪತ್ನಿಯರು, ಮಕ್ಕಳು ಕೂಡ ಸೇರಿದ್ದಾರೆ. ಇವರೆಲ್ಲ 2010 ರಲ್ಲಿ ಮಾಜಿ ಉಗ್ರರಿಗೆ ನೀಡಿದ್ದ ಪುನರ್ವಸತಿ ನೀತಿಯಡಿಯಲ್ಲಿ ಕಣಿವೆಗೆ ಮರಳಿದ್ದರು.
ಇವರಲ್ಲಿ 36 ಮಂದಿ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ಉಳಿದಂತೆ ಬಾರಾಮುಲ್ಲಾ ಮತ್ತು ಕುಪ್ವಾರಾದಲ್ಲಿ 9 ಮಂದಿ, ಬುದ್‌ಗಾಮ್‌ನಲ್ಲಿ ನಾಲ್ಕು, ಶೋಪಿಯಾನ್ ಜಿಲ್ಲೆಯಲ್ಲಿ ಇಬ್ಬರು ವಾಸಿಸುತ್ತಿದ್ದರು.

