HEALTH TIPS

ಪ್ರತಿಸುಂಕ ಸಮರ: ಅಮೆರಿಕ ಜೊತೆ ಮಾತುಕತೆಗೆ ಚೀನಾ ನಕಾರ

ಬೀಜಿಂಗ್: 'ಅಮೆರಿಕದೊಂದಿಗಿನ ಪ್ರತಿಸುಂಕ ಸಮರಕ್ಕೆ ಇತಿಶ್ರೀ ಹಾಡಲು ದ್ವಿಪಕ್ಷೀಯ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುವ ಯಾವುದೇ ಲಕ್ಷಣಗಳಿಲ್ಲ' ಎಂದು ಹೇಳಿರುವ ಚೀನಾ, ಮಾತುಕತೆಗೆ ನಿರಾಕರಿಸಿದೆ.

'ಸುಂಕದ ಕುರಿತು ಚೀನಾ ಮತ್ತು ಅಮೆರಿಕ ಯಾವುದೇ ಸಮಾಲೋಚನೆ ಅಥವಾ ಚರ್ಚೆ ನಡೆಸಿಲ್ಲ.

ಇನ್ನು ಒಪ್ಪಂದ ದೂರದ ಮಾತಾಯಿತು' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೋ ಜೈಕುನ್‌ ಮಾಧ್ಯಮಗಳಿಗೆ ಹೇಳಿದ್ದಾರೆ.

'ಸುಂಕ ಸಮರವನ್ನು ಅಮೆರಿಕ ಆರಂಭಿಸಿದೆ. ಈ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ. ಅನಿವಾರ್ಯವಾದಲ್ಲಿ ಚೀನಾ ಹೋರಾಡಲಿದೆ. ಮಾತುಕತೆಗೆ ಅಮೆರಿಕ ಸಿದ್ಧವಿದ್ದರೆ ನಮ್ಮ ಬಾಗಿಲು ಸದಾ ತೆರೆದಿರುತ್ತದೆ. ಮಾತುಕತೆ ಮತ್ತು ಚರ್ಚೆಗಳು ಸಮಾನತೆ, ಗೌರವ ಮತ್ತು ಪರಸ್ಪರ ಲಾಭವನ್ನು ಆಧರಿಸಿರುತ್ತದೆ' ಎಂದಿದ್ದಾರೆ.

'ಒಂದೊಮ್ಮೆ ಈ ಸಮಸ್ಯೆಯನ್ನು ಪರಿಹರಿಸಲು ಅಮೆರಿಕ ಇಚ್ಛಿಸಿದ್ದೇ ಆದಲ್ಲಿ, ಅದು ಅಂತರರಾಷ್ಟ್ರೀಯ ಸಮುದಾಯ ಮತ್ತು ದೇಶೀಯ ಮಧ್ಯಸ್ಥಿಕೆಗಾರರ ತರ್ಕಬದ್ಧ ಮಾತುಗಳನ್ನು ಆಲಿಸಬೇಕು. ಚೀನಾದ ಉತ್ಪನ್ನಗಳ ಮೇಲಿನ ಏಕಪಕ್ಷೀಯ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ಸಮಾನ ಸಂವಾದಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ಅಮೆರಿಕ ಪ್ರವೇಶಿಸುವ ಚೀನಾದ ಉತ್ಪನ್ನಗಳ ಮೇಲೆ ವಿಧಿಸಿರುವ ಪ್ರತಿಸುಂಕ ದರವನ್ನು ಪರಿಷ್ಕರಿಸುವ ಇಂಗಿತ ವ್ಯಕ್ತಪಡಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹೇಳಿಕೆಯ ಬೆನ್ನಲ್ಲೇ ಚೀನಾ ಪ್ರತಿಕ್ರಿಯಿಸಿದೆ.

ಟ್ರಂಪ್ ಸರ್ಕಾರವು ಚೀನಾ ಉತ್ಪನ್ನಗಳ ಮೇಲೆ ಆರಂಭದಲ್ಲಿ ಶೇ 145ರಷ್ಟು ಸುಂಕ ವಿಧಿಸಿತ್ತು. ಏ. 17ರಂದು ಶ್ವೇತಭವನ ಹೊರಡಿಸಿದ ಮಾಹಿತಿ ಅನ್ವಯ ಚೀನಾ ಉತ್ಪನ್ನಗಳ ಮೇಲೆ ಶೇ 245ರಷ್ಟು ಸುಂಕ ವಿಧಿಸಲಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಉತ್ಪನ್ನಗಳ ಮೇಲೆ ಚೀನಾ ಸರ್ಕಾರವು ಶೇ 125ರಷ್ಟು ಸುಂಕ ವಿಧಿಸಿ ಆದೇಶಿಸಿತು.

ಚೀನಾ ಹೊರತುಪಡಿಸಿ ಪ್ರತಿಸುಂಕಕ್ಕೆ ಒಳಗಾಗಿದ್ದ ಉಳಿದೆಲ್ಲಾ ರಾಷ್ಟ್ರಗಳ ಉತ್ಪನ್ನಗಳ ಮೇಲಿನ ಸುಂಕಕ್ಕೆ ಅಮೆರಿಕ 90 ದಿನಗಳ ತಡೆಯೊಡ್ಡಿತು. ಇದು ಬೀಜಿಂಗ್ ಅನ್ನು ಇನ್ನಷ್ಟು ಕೆರಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries