ಚೆನ್ನೈ: ಮಯೊನೀಸ್ ತಯಾರಿಕೆ, ಸಂಗ್ರಹ ಮತ್ತು ಮಾರಾಟವನ್ನು ತಮಿಳುನಾಡು ಸರ್ಕಾರವು ಒಂದು ವರ್ಷದ ಮಟ್ಟಿಗೆ ನಿಷೇಧಿಸಿದೆ. 'ಮಯೋನೀಸ್ ಸೇವನೆಯು ವಿಷವಾಗುವ ಸಂಭವ ಹೆಚ್ಚಿದೆ' ಎಂದು ಸರ್ಕಾರ ಹೇಳಿದೆ.ಜಮ್ಮು
ಏಪ್ರಿಲ್ 8ರಿಂದ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿತ್ತು.
ಮಯೊನೀಸ್ ಅನ್ನು ಬೇಯಿಸದ ಮೊಟ್ಟೆ, ತರಕಾರಿ ಎಣ್ಣೆ, ವಿನಿಗರ್ ಮತ್ತು ಕೆಲವು ಸೀಸನಿಂಗ್ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದನ್ನು ಹಲವು ಆಹಾರ ಪದಾರ್ಧಗಳಲ್ಲಿ ಬಳಸಲಾಗುತ್ತದೆ.
'ಮಯೊನೀಸ್ ತಯಾರಿಸಲು ಬೇಯಿಸದ ಮೊಟ್ಟೆಯನ್ನು ಬಳಸಲಾಗುತ್ತದೆ. ಜೊತೆಗೆ, ಇದರ ಸಂಗ್ರಹವನ್ನೂ ಸೂಕ್ತ ರೀತಿಯಲ್ಲಿ ಮಾಡುವುದಿಲ್ಲ. ಇದರಿಂದ ಹಲವು ಬಗೆಯ ಸೂಕ್ಷ್ಮಜೀವಾಣುಗಳು ಉತ್ಪತ್ತಿಯಾಗುತ್ತಿವೆ. ಇದು ಮಯೊನೀಸ್ ಅನ್ನು ವಿಷವಾಗಿಸುತ್ತಿದೆ' ಎಂದು ಸರ್ಕಾರವು ತನ್ನ ಆದೇಶದಲ್ಲಿ ಹೇಳಿದೆ.




