ಎಚ್.ಪಿ. ಹೊಸ ಪೀಳಿಗೆಯ ಎ.ಐ. ಪಿಸಿ ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಎಚ್.ಪಿ ಎಲೈಟ್‍ಬುಕ್, ಎಚ್.ಪಿ. ಪ್ರೊಬುಕ್ ಮತ್ತು ಎಚ್.ಪಿ. ಓಮ್ನಿಬುಕ್ ಸರಣಿಗಳನ್ನು ದೊಡ್ಡ ಉದ್ಯಮಗಳು, ಸ್ಟಾರ್ಟ್‍ಅಪ್‍ಗಳು ಮತ್ತು ಚಿಲ್ಲರೆ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಸರಣಿಯಲ್ಲಿ ಬಳಸಲಾದ ಪ್ರೊಸೆಸರ್‍ಗಳು ಇಂಟೆಲ್ ಕೋರ್ ಅಲ್ಟ್ರಾ 200 ವಿ. ಸರಣಿ, ಎಎಂಡಿ ರೈಜೆನ್ ಎಒನ್ 300 ಸರಣಿ, ಮತ್ತು ಕ್ವಾಲ್ಕಾಮ್ ಸ್ನಾಪ್‍ಡ್ರಾಗನ್ ಎಕ್ಸ್, ಎಕ್ಸ್ ಎಲೈಟ್ ಮತ್ತು ಎಕ್ಸ್ ಪ್ಲಸ್.
ಹೊಸ ಶ್ರೇಣಿಯು ಎಚ್.ಪಿ. ಎಐ ಕಂಪ್ಯಾನಿಯನ್, ಪಾಲಿ ಕ್ಯಾಮೆರಾ ಪ್ರೊ ವೈಶಿಷ್ಟ್ಯಗಳು, ಪಾಲಿ ಆಡಿಯೊ ಮೂಲಕ ಆಡಿಯೊ ಟ್ಯೂನಿಂಗ್ ಮತ್ತು ಮೈ ಎಚ್.ಪಿ. ಪ್ಲಾಟ್‍ಫಾರ್ಮ್‍ನಂತಹ ಅತ್ಯಾಧುನಿಕ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಭದ್ರತಾ ವೈಶಿಷ್ಟ್ಯಗಳು ದೃಶ್ಯ ಹ್ಯಾಕಿಂಗ್ ಅನ್ನು ತಡೆಯಲು ಮತ್ತು ಸೂಕ್ಷ್ಮ ಡೇಟಾವನ್ನು ಖಾಸಗಿಯಾಗಿಡಲು ಸಹಾಯ ಮಾಡುತ್ತದೆ. ಹೊಸ ಎಚ್.ಪಿ. ಎಐ. ಪಿಸಿ ಶ್ರೇಣಿಯು ದೀರ್ಘ ಬ್ಯಾಟರಿ ಬಾಳಿಕೆ ಮತ್ತು ತಡೆರಹಿತ ಬಹುಕಾರ್ಯಕವನ್ನು ಸಹ ನೀಡುತ್ತದೆ.
ಎಚ್.ಪಿ. ಇಲೈಟ್ ಬುಕ್ 8 ಜಿ1ಐ ರೂ. 1,46,622 ರಿಂದ ಪ್ರಾರಂಭವಾಗುತ್ತದೆ, ಇಲೈಟ್ ಬುಕ್ 6 ಜಿ.1.ಕ್ಯು ರೂ. 87,440 ರಿಂದ ಪ್ರಾರಂಭವಾಗುತ್ತದೆ ಮತ್ತು ಪ್ರೊ.ಬುಕ್ 4 ಜಿ.1.ಕ್ಯು ರೂ. 77,200 ರಿಂದ ಪ್ರಾರಂಭವಾಗುತ್ತದೆ. ಇವುಗಳನ್ನು ಎಚ್.ಪಿ. ಆನ್‍ಲೈನ್ ಅಂಗಡಿಯಿಂದ ಆರ್ಡರ್ ಮಾಡಬಹುದು. ಎಚ್.ಪಿ. ಓಮ್ನಿಬುಕ್ ಅಲ್ಟ್ರಾ 14 ಆರಂಭಿಕ ಬೆಲೆ 186,499 ರೂ., ಓಮ್ನಿಬುಕ್ ಎಕ್ಸ್‍ಫ್ಲಿಪ್ 14 ರೂ. 114,999, ಓಮ್ನಿಬುಕ್ 7 ಏರೋ 13 ರೂ. 87,499 ಮತ್ತು ಓಮ್ನಿಬುಕ್ 5 16 ರೂ. 78,999. ಇವು ಎಚ್.ಪಿ. ವಲ್ರ್ಡ್ ಸ್ಟೋರ್ ಮತ್ತು ಆನ್‍ಲೈನ್ ಸ್ಟೋರ್‍ನಲ್ಲಿ ಲಭ್ಯವಿದೆ. ಎಚ್.ಪಿ. ಎಲೈಟ್‍ಬುಕ್ 8 ಜಿ.1.ಎ. ಮತ್ತು 6 ಜಿಐಎ ಶೀಘ್ರದಲ್ಲೇ ಎಚ್.ಪಿ. ಆನ್‍ಲೈನ್ ಸ್ಟೋರ್‍ನಲ್ಲಿ ಲಭ್ಯವಿರುತ್ತವೆ.






