HEALTH TIPS

IAF | ದೀರ್ಘ ವ್ಯಾಪ್ತಿ ಗ್ಲೈಡ್‌ ಬಾಂಬ್ 'ಗೌರವ್' ಪರೀಕ್ಷೆ ಯಶಸ್ವಿ

ನವದೆಹಲಿ: ಸುಖೋಯ್ ಯುದ್ಧವಿಮಾನ ಬಳಸಿ, ದೀರ್ಘ ವ್ಯಾಪ್ತಿ ಸಾಮರ್ಥ್ಯದ ಗ್ಲೈಡ್‌ ಬಾಂಬ್‌ (ಎಲ್‌ಆರ್‌ಜಿಬಿ) 'ಗೌರವ್‌'ದ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಯಶಸ್ವಿಯಾಗಿ ನೆರವೇರಿಸಿದೆ.

'ಏಪ್ರಿಲ್ 8ರಿಂದ 10ರ ವರೆಗೆ ಈ ಪರೀಕ್ಷೆಗಳನ್ನು ನೆರವೇರಿಸಲಾಗಿದೆ.

ಈ ಬಾಂಬ್ 100 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ತಲುಪಿ, ನಾಶ ಮಾಡಿತು' ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಪರೀಕ್ಷೆಯಿಂದಾಗಿ ವಾಯುಪಡೆಗೆ ಈ ಅತ್ಯಾಧುನಿಕ ಆಯುಧವನ್ನು ಸೇರ್ಪಡೆ ಮಾಡುವುದಕ್ಕೆ ದಾರಿ ಸುಗಮಗೊಂಡಂತಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ಡಿಆರ್‌ಡಿಒ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ 'ಗೌರವ್', ಸಾವಿರ ಕೆ.ಜಿ ಭಾರವಿದೆ.

ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಡಿಆರ್‌ಡಿಒ, ವಾಯುಪಡೆ ಹಾಗೂ ಈ ಬಾಂಬ್‌ ಅಭಿವೃದ್ಧಿಗೆ ಕೈಜೋಡಿಸಿರುವ ಉದ್ದಿಮೆಗಳನ್ನು ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries