ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತರಾದ 26 ಮಂದಿಯಲ್ಲಿ ಒಬ್ಬರು ಮಾತ್ರ ವಿದೇಶಿ ಪ್ರಜೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಯಲ್ಲಿ ಮೃತರಾದವರ ನಿಖರ ಸಂಖ್ಯೆಯನ್ನು ಸರ್ಕಾರವು ಬುಧವಾರ ರಾತ್ರಿ ಘೋಷಿಸಿದ್ದು, 25 ಭಾರತೀಯರು ಮತ್ತು ನೇಪಾಳದ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಸಿದ್ಧವಾಗಿದ್ದ ಪಟ್ಟಿಯಲ್ಲಿ ಉತ್ತರಾಖಂಡ ನಿವಾಸಿಯನ್ನು ಯುಎಇ ನಿವಾಸಿ ಎಂದು ನಮೂದಿಸಲಾಗಿತ್ತು.




