HEALTH TIPS

QR Code ಕಂಡು ಹಿಡಿದವರು ಯಾರು? ಇದನ್ನು ಸ್ಕ್ಯಾನ್‌ಗೆ ಬಳಸಿದ್ದು ಯಾಕೆ ಗೊತ್ತಾ?

 ಇಂದಿನ ಡಿಜಿಟಲ್ ಯುಗದಲ್ಲಿ QR ಕೋಡ್‌ಗಳು ಸರ್ವವ್ಯಾಪಿಯಾಗಿವೆ. ರೆಸ್ಟೋರೆಂಟ್‌ನ ಮೆನುವಿನಿಂದ ಹಿಡಿದು ಆನ್‌ಲೈನ್ ಪೇಮೆಂಟ್‌ವರೆಗೆ, ಈ ಕಪ್ಪು-ಬಿಳಿ ಬಣ್ಣದ ಚೌಕಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನವನ್ನು ಯಾರು, ಯಾವಾಗ, ಮತ್ತು ಹೇಗೆ ಕಂಡುಹಿಡಿದರು ಎಂದು ಯಾರಿಗಾದ್ರೂ ಗೊತ್ತಾ? QR ಕೋಡ್‌ನ ಆವಿಷ್ಕಾರದ ಕಥೆಯು ಜಪಾನ್‌ನ ಆಟೋಮೋಟಿವ್ ಉದ್ಯಮದಿಂದ ಆರಂಭವಾಗಿ ಜಾಗತಿಕ ತಾಂತ್ರಿಕ ಕ್ರಾಂತಿಯಾಗಿ ಮಾರ್ಪಟ್ಟ ಒಂದು ರೋಚಕ ಪಯಣವಾಗಿದೆ.

QR ಕೋಡ್, ಅಂದರೆ ‘ಕ್ವಿಕ್ ರೆಸ್ಪಾನ್ಸ್ ಕೋಡ್’ 1994ರಲ್ಲಿ ಜಪಾನ್‌ನ ಡೆನ್ಸೋ ವೇವ್ ಎಂಬ ಕಂಪನಿಯಿಂದ ಇದನ್ನು ಅಭಿವೃದ್ಧಿಪಡಿಸಲಾಯಿತು. ಡೆನ್ಸೋ ವೇವ್ ಟೊಯೊಟಾ ಗ್ರೂಪ್‌ನ ಅಂಗಸಂಸ್ಥೆಯಾಗಿದ್ದು, ಆಟೋಮೋಟಿವ್ ಭಾಗಗಳ ತಯಾರಿಕೆಯಲ್ಲಿ ಪರಿಣತಿಯನ್ನು ಹೊಂದಿತ್ತು. ಈ ಕೋಡ್‌ನ ಆವಿಷ್ಕಾರಕ ಮಸಾಹಿರೊ ಹಾರಾ, ಡೆನ್ಸೋ ವೇವ್‌ನ ಇಂಜಿನಿಯರ್, ಅವರ ತಂಡದೊಂದಿಗೆ ಸೇರಿಕೊಂಡು ಈ ತಂತ್ರಜ್ಞಾನವನ್ನು ರೂಪಿಸಿದರು. ಆದರೆ ಈ ಆವಿಷ್ಕಾರದ ಹಿಂದಿನ ಉದ್ದೇಶವೇನಾಗಿತ್ತು ಗೊತ್ತಾ?


ಡೆನ್ಸೊ ವೇವ್‌ನಲ್ಲಿರುವ ಮಸಾಹಿರೊ ಮತ್ತು ಅವರ ತಂಡವು ಹಳೆಯ ಬಾರ್‌ಕೋಡ್‌ಗಳಿಗಿಂತ ವೇಗವಾದ ಸುಧಾರಿತ ಸಾಧನವನ್ನು ಬಯಸಿತು. QR ಕೋಡ್‌ಗಳನ್ನು ಉತ್ಪನ್ನಗಳನ್ನು ಟ್ರ್ಯಾಕ್ ಮಾಡುವುದು ಅಥವಾ ವಸ್ತುಗಳನ್ನು ಗುರುತಿಸುವಂತಹ ವಿಷಯಗಳಿಗೆ ಡೇಟಾವನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನು ಮೊದಲು ಕಾರು ಉದ್ಯಮ ಟೊಯೋಟಾ ವಾಹನ ಭಾಗಗಳನ್ನು ಲೇಬಲ್ ಮಾಡಲು ಮತ್ತು ನಿರ್ವಹಿಸಲು ಬಳಸಿತು.

ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬಲ್ಲ, ವೇಗವಾಗಿ ಸ್ಕ್ಯಾನ್ ಮಾಡಬಹುದಾದ, ಮತ್ತು ದೋಷ-ನಿರೋಧಕ ತಂತ್ರಜ್ಞಾನವನ್ನು ರಚಿಸುವುದು ಇವರ ಗುರಿಯಾಗಿತ್ತು. ಎರಡು ವರ್ಷಗಳ ಸಂಶೋಧನೆ ಮತ್ತು ಪ್ರಯೋಗದ ನಂತರ, 1994ರಲ್ಲಿ ಕಿಖ ಕೋಡ್ ಅಂತಿಮವಾಗಿ ಪರಿಚಯಿಸಲಯಿತು.

ಕಿಖ ಕೋಡ್ ಒಂದು 2ಆ ಕೋಡ್ ಆಗಿದ್ದು, ಇದು ಬಾರ್‌ಕೋಡ್‌ಗಿಂತ ಗಣನೀಯವಾಗಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬಲ್ಲದು. ಇನ್ನು ಕಿಖ ಕೋಡ್‌ಗಳನ್ನು ಯಾವುದೇ ಮೂಲೆಯಿಂದಲೂ ಸ್ಕ್ಯಾನ್ ಮಾಡಬಹುದು, ಇದು ಬಾರ್‌ಕೋಡ್‌ಗಿಂತ ದೊಡ್ಡ ಪ್ರಯೋಜನವಾಗಿದೆ. ಅಲ್ಲದೇ ಕಿಖ ಕೋಡ್‌ನ 30% ಭಾಗ ಹಾನಿಯಾದರೂ, ಅದನ್ನು ಇನ್ನೂ ಸ್ಕ್ಯಾನ್ ಮಾಡಿ ಮಾಹಿತಿಯನ್ನು ಪಡೆಯಬಹುದು. ಈ ಫೀಚರ್ಸ್‌ ಕಾರ್ಖಾನೆಯಂತಹ ಕಠಿಣ ಪರಿಸರದಲ್ಲಿ ಅತ್ಯಂತ ಉಪಯುಕ್ತವಾಗಿತ್ತು.

ಆರಂಭದಲ್ಲಿ, QR ಕೋಡ್‌ಗಳನ್ನು ಕೇವಲ ಡೆನ್ಸೋ ವೇವ್‌ನ ಆಂತರಿಕ ಬಳಕೆಗಾಗಿ ರಚಿಸಲಾಗಿತ್ತು. ಆದರೆ, ಡೆನ್ಸೋ ವೇವ್ ಈ ತಂತ್ರಜ್ಞಾನವನ್ನು ನಂತರ ಎಲ್ಲರಿಗೂ ಪರಿಚಯಿಸಲು ನಿರ್ಧರಿಸಿತು. 1999ರಲ್ಲಿ ಕಿಖ ಕೋಡ್‌‌ನ ಪೇಟೆಂಟ್‌ನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು, ಇದರಿಂದ ಯಾರಾದರೂ ಉಚಿತವಾಗಿ ಇದನ್ನು ಬಳಸಬಹುದಾಗಿತ್ತು. ಈ ನಿರ್ಧಾರವು ಕಿಖ ಕೋಡ್‌‌ಗಳ ಜಾಗತಿಕ ಹರಡುವಿಕೆಗೆ ಪ್ರಮುಖ ಕಾರಣವಾಯಿತು.

2000ರ ದಶಕದ ಆರಂಭದಲ್ಲಿ, ಸ್ಮಾರ್ಟ್‌ಫೋನ್‌ಗಳ ಜನಪ್ರಿಯತೆಯೊಂದಿಗೆ ಕಿಖ ಕೋಡ್‌ಗಳು ಜಪಾನ್‌ನಲ್ಲಿ ಜನರ ದೈನಂದಿನ ಜೀವನದ ಭಾಗವಾದವು. ವ್ಯಾಪಾರಿಗಳು ಇವುಗಳನ್ನು ಜಾಹೀರಾತು, ಪೇಮೆಂಟ್‌ ಮತ್ತು ಗ್ರಾಹಕ ಸಂಪರ್ಕಕ್ಕಾಗಿ ಬಳಸಲಾರಂಭಿಸಿದರು. 2010ರ ದಶಕದ ವೇಳೆಗೆ, QR ಕೋಡ್‌ಗಳು ಜಗತ್ತಿನಾದ್ಯಂತ ಹರಡಿದವು, ವಿಶೇಷವಾಗಿ ಏಷ್ಯಾದ ದೇಶಗಳಾದ ಚೀನಾ ಮತ್ತು ಭಾರತದಲ್ಲಿ.

ಭಾರತದಲ್ಲಿ ಕಿಖ ಕೋಡ್‌ ಬಳಕೆ: ಭಾರತದಲ್ಲಿ, UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಜನಪ್ರಿಯವಾದಾಗ ಕಿಖ ಕೋಡ್‌ಗಳು ವ್ಯಾಪಕವಾಗಿ ಬಳಕೆಗೆ ಬಂದವು. ರಸ್ತೆಬದಿಯ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರ ಸಂಸ್ಥೆಗಳವರೆಗೆ, ಕಿಖ ಕоಡ್‌ಗಳು ಡಿಜಿಟಲ್ ಪಾವತಿಗಳನ್ನು ಸರಳಗೊಳಿಸಿವೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಗದು ರಹಿತ ವಹಿವಾಟುಗಳಿಗೆ ಒತ್ತು ನೀಡಿದ್ದರಿಂದ ಕಿಖ ಕೋಡ್‌ಗಳ ಬಳಕೆ ಗಗನಕ್ಕೇರಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries