ಜಮ್ಮು ಕಾಶ್ಮೀರ : ನಿನ್ನೆ ತಾನೆ ಕಾಶ್ಮೀರದ ಫಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಭೀಕರವಾದ ಗುಂಡಿನ ದಾಳಿ ನಡೆಸಿ 30ಕ್ಕೂ ಹೆಚ್ಚು ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದಾಳಿಯನ್ನು TRF ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತೀಯ ಸೇನೆ ಅಲರ್ಟ್ ಆಗಿದ್ದು ಭಾರತೀಯ ಸೇನೆ ಸಿಆರ್ಪಿಎಫ್ ಹಾಗೂ ಪೊಲೀಸರು TRF ಕಮಾಂಡರ್ ಅನ್ನು ಸುತ್ತುವರಿದಿದ್ದಾರೆ.
ಹೌದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ತಂಗ್ ಮಾರ್ಗ್ ನಲ್ಲಿ ಟಿ ಆರ್ ಎಫ್ ಭಯೋತ್ಪಾದಕ ಸಂಘಟನೆ ಹಾಗೂ ಭಾರತೀಯ ಸೇನೆ ಸಿಆರ್ಪಿಎಫ್ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ತಂಗ್ ಮಾರ್ಗ್ ನಲ್ಲಿ ಪೊಲೀಸರು, ಸೇನೆ CRPF ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ TRF ಕಮಾಂಡರ್ ನನ್ನು ಇದೀಗ ಸೇನೆ ಸುತ್ತುವರೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.




