ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗೆ ಮುಸ್ಲಿಂ ಕಾನೂನು ಮಂಡಳಿ ಮುಂದಾಗಿದೆ ʼವಕ್ಫ್ ಉಳಿಸಿ, ಸಂವಿಧಾನವನ್ನು ಉಳಿಸಿʼ ಹೆಸರಿನಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಐಎಂಪಿಎಲ್‌ಬಿ ಘೋಷಿಸಿದೆ.
ಇತ್ತೀಚೆಗೆ ಸಂಸತ್ತು ಅಂಗೀಕರಿಸಿರುವ ವಕ್ಫ್ ತಿದ್ದುಪಡಿ ಮಸೂದೆ, ಇಸ್ಲಾಮಿಕ್ ಮೌಲ್ಯಗಳು, ಧರ್ಮ ಮತ್ತು ಶರಿಯಾ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ, ಕೋಮು ಸಾಮರಸ್ಯ ಮತ್ತು ಭಾರತೀಯ ಸಂವಿಧಾನದ ಅಡಿಪಾಯದ ಮೇಲೆ ತೀವ್ರ ದಾಳಿ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಮುಂದಿನ ವಾರದಿಂದ ದೇಶಾದ್ಯಂತ ಪ್ರತಿಭಟನೆಗಳು ಆರಂಭವಾಗಲಿದೆ. ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿದ್ದು, ಗೃಹಸಚಿವರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದು. ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾಧ್, ಬೆಂಗಳೂರು, ವಿಜಯವಾಡ, ಮಲಪ್ಪುರಂ, ಪಾಟ್ನಾ, ರಾಂಚಿ, ಲಕ್ನೋ ಮುಂತಾದ ಕಡೆಗಳಲ್ಲಿ ಪ್ರಮುಖ ಪ್ರತಿಭಟನೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.




