ಮಾಸ್ಕೋ: ರಷ್ಯಾದ ನೆಲೆ ಗುರಿಯಾಗಿಸಿ ಉಕ್ರೇನ್ ಗುರುವಾರ ರಾತ್ರಿಯಿಡೀ ಹಾರಿಸಿದ 121 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ' ಎಂದು ರಷ್ಯಾ ಸೇನೆ ತಿಳಿಸಿದೆ.
'ಕ್ರಿಮಿಯಾ, ಬ್ಲ್ಯಾಕ್‌ಸೀ, ಹಾಗೂ ದೇಶದ ದಕ್ಷಿಣ ಭಾಗಗಳನ್ನು ಗುರಿಯಾಗಿರಿಸಿ ದಾಳಿ ನಡೆದಿತ್ತು ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಇಲ್ಲಿನ ಆರ್‌ಟಿ.ಕಾಮ್ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.'89 ವಿಂಗ್ ಡ್ರೋನ್, ಸೆವಾಸ್ಟೊಪೊಲ್ ಡ್ರೋನ್‌ಗಳು ಇದರಲ್ಲಿ ಸೇರಿವೆ. ದಾಳಿಯಿಂದ ಯಾವುದೇ ಹಾನಿ ಉಂಟಾಗಿಲ್ಲ' ಎಂದು ರಕ್ಷಣಾ ಇಲಾಖೆಯು ಪ್ರತಿಕ್ರಿಯಿಸಿದೆ.
ರಷ್ಯಾ ಸೇನೆ ಕೂಡಾ ಡ್ರೋನ್ ದಾಳಿ ನಡೆಸಿದ್ದು, ಉಕ್ರೇನ್‌ನ ಜಪೊರಿಝಿಯಾ ನಗರದಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.




