HEALTH TIPS

3 ತಿಂಗಳ ಮುಂಗಡ ರೇಷನ್ ವಿತರಣೆಗೆ ಕೇಂದ್ರ ಆದೇಶ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಉಂಟಾಗಿರುವ ಪರಿಣಾಮ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ 3 ತಿಂಗಳಿನ ಮುಂಗಡ ಆಹಾರ ಪದಾರ್ಥಗಳನ್ನು ಒಟ್ಟಿಗೆ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅದರಂತೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡ್‌ದಾರರಿಗೆ ವಿತರಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.
ಕೇಂದ್ರ ಸರ್ಕಾರವು ಮೂರು ತಿಂಗಳ ಅವಧಿಯ ಆಹಾರ ಧಾನ್ಯಗಳನ್ನು ಮುಂಗಡವಾಗಿ ಭಾರತೀಯ ಆಹಾರ ನಿಗಮ (ಎಫ್‌ಸಿಐ)ದ ಗೋದಾಮುಗಳಿಗೆ ಸಾಗಿಸಲು ಕ್ರಮ ತೆಗೆದುಕೊಂಡಿದೆ. ವಿಶೇಷವಾಗಿ ಮುಂಬರುವ ಮುಂಗಾರು ಹಿನ್ನೆಲೆಯಲ್ಲಿ ಪ್ರತಿ ಮನೆಗೂ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ದುರ್ಗಮ ಪ್ರದೇಶಗಳಲ್ಲಿ ಸಂಪರ್ಕ ಕಡಿತದಿಂದಾಗಿ ಉಂಟಾಗಬಹುದುದಾದ ಅಡೆತಡೆ ನಿವಾರಿಸುವುದು ಇದರ ಉದ್ದೇಶವಾಗಿದೆ. ಈ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯರಿಗೆ ತಲಾ ೧೫ ಕೆ.ಜಿ. ಅಕ್ಕಿ/ರಾಗಿ ಸಿಗಲಿದೆ.
ಬೇಡಿಕೆ ವಿವರ ಸಿದ್ಧಪಡಿಸಿದ ಕೇಂದ್ರ:
ಜೂನ್, ಜುಲೈ, ಆಗಸ್ಟ್ ಅವಧಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿ ಹಂಚಿಕೆಗೆ ಸಂಬಂಧಿಸಿದಂತೆ ಎಫ್‌ಸಿಐ ಆಹಾರ ಪದಾರ್ಥಗಳ ಬೇಡಿಕೆ ವಿವರ ಪಟ್ಟಿ ಸಿದ್ಧಪಡಿಸಿದೆ. ಅದರಂತೆ ೪,೫೧,೮೯೩ ಮೆಟ್ರಿಕ್ ಟನ್ ಅಕ್ಕಿ, ೧,೧೭,೮೭೦ ಮೆ.ಟನ್ ರಾಗಿ ಹಾಗೂ ೮೨,೪೪೬ ಮೆ. ಟನ್ ಜೋಳ ಸೇರಿ ಒಟ್ಟು ೬,೫೨,೨೦೯ ಮೆ. ಟನ್ ಆಹಾರ ಪದಾರ್ಥಗಳನ್ನು ನೀಡಲಿದೆ.
ಕೇಂದ್ರ ಸರ್ಕಾರ ಮುಂಗಡವಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದೆ. ಆದರೆ ರಾಜ್ಯದ ಪಾಲು (ತಲಾ ೫ ಕೆ.ಜಿ.) ಹೇಗೆ ವಿತರಣೆಯಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ನಿಲುವನ್ನು ಆಹಾರ ಇಲಾಖೆ ನೀಡಿಲ್ಲ. ಒಂದು ವೇಳೆ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರವು ನಿರ್ಧರಿಸಿದರೆ ಬಿಪಿಎಲ್ ಪಡಿತರದಾರರಿಗೆ ಪ್ರತಿ ಸದಸ್ಯರಿಗೆ ತಲಾ ೧೦ ಕೆ.ಜಿ. ಧಾನ್ಯಗಳಂತೆ (ಕೇಂದದ ಪಾಲು ೫ ಕೆ.ಜಿ. ರಾಜ್ಯದ ಪಾಲು ೫ ಕೆ.ಜಿ.) ಸೇರಿ ಪ್ರತಿ ಸದಸ್ಯರಿಗೆ ೩೦ ಕೆ.ಜಿಯಂತೆ ವಿತರಣೆಯಾಗಲಿದೆ. ಇದೀಗ ಕೇಂದ್ರವು ಮುಂಗಡವಾಗಿ ಮೂರು ತಿಂಗಳಿಗೆ ಒಟ್ಟು ೬,೫೨,೨೦೯ ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ಗೋದಾಮುಗಳಿಗೆ ಸಾಗಿಸಲು ಕ್ರಮ ಕೈಗೊಂಡರೆ, ರಾಜ್ಯ ಸರ್ಕಾರ ಕೂಡ ಇಷ್ಟೇ ಪ್ರಮಾಣದ ಆಹಾರ ಪದಾರ್ಥಗಳನ್ನು ಸಂಗ್ರಹಿಸಬೇಕಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries