ಬೆಂಗಳೂರು: ಫೆಡರಲ್ ಬ್ಯಾಂಕ್ ನಾಲ್ಕನೇ ತ್ರೈಮಾಸಿಕದಲ್ಲಿ 1030.23 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2025ನೇ ಹಣಕಾಸು ವರ್ಷದಲ್ಲಿ ಒಟ್ಟು 4,051.89 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ವ್ಯವಹಾರದ ಮೌಲ್ಯ 5.18 ಲಕ್ಷ ಕೋಟಿ ರೂ. ಆಗಿದೆ. ವರ್ಷದಲ್ಲಿ ಒಟ್ಟು ಠೇವಣಿಗಳ ಪ್ರಮಾಣ 12.32ರಷ್ಟು ಏರಿದೆ.
"ಲಾಭದಾಯಕ ಬೆಳವಣಿಗೆಯೇ ನಮ್ಮ ಆದ್ಯತೆಯಾಗಿತ್ತು. ಇದನ್ನು ನಾವು ನಿರಂತರ ವಾಗಿ ಪ್ರತಿಪಾದಿಸಿಕೊಂಡು ಬಂದಿದ್ದೇವೆ. ನಾಲ್ಕನೇ ತ್ರೈಮಾಸಿಕ ವರದಿಯು ನಮ್ಮ ಕಾರ್ಯಕ್ಷಮತೆಯ ಸ್ಪಷ್ಟ ಫಲಿತಾಂಶವನ್ನು ತಿಳಿಸುತ್ತದೆ.
2024-25ನೇ ಹಣಕಾಸು ವರ್ಷದಲ್ಲಿ ಹಲವು ಉಪಕ್ರಮ ಗಳನ್ನು ಕೈಗೊಂಡಿದ್ದವು. ಇದು ಆದಾಯ, ನಿವ್ವಳ ಲಾಭ, ಠೇವಣಿ ಪ್ರಮಾಣ- ಹೀಗೆ ಹಲವು ವಿಭಾಗಗಳಲ್ಲಿ ನಿರೀಕ್ಷಿತ ಫಲವನ್ನು ನೀಡಿದೆ,'' ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ.ವಿ.ಎಸ್. ಮಣಿಯನ್ ಹೇಳಿದ್ದಾರೆ.
"ಒಟ್ಟು ವಾರ್ಷಿಕ ವಹಿವಾಟು ೫ ಕೋಟಿ ರೂ. ದಾಟಿದ್ದು, ವಾರ್ಷಿಕ ನಿವ್ವಳ ಲಾಭದಲ್ಲಿ 4,501.89 ಕೋಟಿ ರೂ. ಆಗಿದೆ,'' ಎಂದು ತಿಳಿಸಿದ್ದಾರೆ.




