HEALTH TIPS

ಭಾರತ-ಪಾಕ್ ಸಂಘರ್ಷ ‌| ಪೂಂಚ್ ಜಿಲ್ಲೆಯಲ್ಲಿ ಸ್ಫೋಟಗೊಳ್ಳದ 42 ಶೆಲ್‌ಗಳ ನಾಶ

 ಜಮ್ಮು: ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇರುವ ವಿವಿಧ ಗ್ರಾಮಗಳಲ್ಲಿ ಸ್ಫೋಟಗೊಳ್ಳದ 42 ಶೆಲ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಭದ್ರತಾ ಸಿಬ್ಬಂದಿ ಭಾನುವಾರ ನಾಶಪಡಿಸಿದ್ದಾರೆ. ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ ಗಡಿ ಗ್ರಾಮಗಳನ್ನು ಗುರಿಯಾಗಿಸಿ ಶೆಲ್‌ ದಾಳಿ ನಡೆದಿತ್ತು.

ಈ ವೇಳೆ ಸ್ಫೋಟಗೊಳ್ಳದ ಶೆಲ್‌ಗಳು ಕೂಡ ಗಡಿಗ್ರಾಮದ ಒಳಗೆ ಬಿದ್ದಿದ್ದವು. ಅವುಗಳನ್ನು ಈಗ ನಾಶಪಡಿಸಲಾಗಿದೆ.

ಶೆಲ್‌ ದಾಳಿ ನಡೆದಿದ್ದ ಪ್ರದೇಶಗಳಲ್ಲಿ ಸಹಜಸ್ಥಿತಿ ಮರುಸ್ಥಾಪಿಸಿ ಜನರಿಗೆ ವಾಸಯೋಗ್ಯವಾಗಿಸಲು ಭದ್ರತಾಪಡೆಗಳು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿ, ಸ್ಫೋಟಗೊಳ್ಳದ ಶೆಲ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ನಾಶಪಡಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries