ನವದೆಹಲಿ: ಪಾಕಿಸ್ತಾನದಿಂದ ₹4,228 ಕೋಟಿ ಮೌಲ್ಯದ ಸರಕುಗಳು ಯುಎಇ, ಸಿಂಗಪುರ, ಇಂಡೊನೇಷ್ಯಾ ಮತ್ತು ಶ್ರೀಲಂಕಾದ ಬಂದರಿನ ಮೂಲಕ ಭಾರತಕ್ಕೆ ಪೂರೈಕೆಯಾಗುತ್ತವೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನವು ಇಷ್ಟು ಮೌಲ್ಯದ ಸರಕುಗಳನ್ನು ನೇರವಾಗಿ ಭಾರತಕ್ಕೆ ರಫ್ತು ಮಾಡುವುದಿಲ್ಲ.
ಆದರೆ, ಅಲ್ಲಿ ಉತ್ಪಾದಿಸುವ ಉತ್ಪನ್ನಗಳು ಈ ರಾಷ್ಟ್ರಗಳ ಮೂಲಕ ಪೂರೈಕೆಯಾಗುತ್ತವೆ ಎಂದು ಹೇಳಿವೆ.
ಯುಎಇ ಮೂಲಕ ಹಣ್ಣುಗಳು, ಖರ್ಜೂರ, ಚರ್ಮ, ಜವಳಿ ಉತ್ಪನ್ನ ರವಾನೆಯಾದರೆ, ಸಿಂಗಪುರ ಮಾರ್ಗವಾಗಿ ರಾಸಾಯನಿಕಗಳು ಪೂರೈಕೆಯಾಗುತ್ತವೆ. ಇಂಡೊನೇಷ್ಯಾ ಮಾರ್ಗವಾಗಿ ಸಿಮೆಂಟ್, ಜವಳಿ ಕಚ್ಚಾ ವಸ್ತುಗಳು ರವಾನೆಯಾಗುತ್ತವೆ. ಶ್ರೀಲಂಕಾ ಮಾರ್ಗವಾಗಿ ಒಣ ಹಣ್ಣುಗಳು, ಉಪ್ಪು, ಚರ್ಮದ ಉತ್ಪನ್ನಗಳು ಪೂರೈಕೆಯಾಗುತ್ತವೆ ಎಂದು ತಿಳಿಸಿವೆ.




