ಬದಿಯಡ್ಕ: ಕೊಲ್ಲಂಗಾನ ಗಾಂಧಿನಗರದ ನವರಂಗ್ ಆಟ್ರ್ಸ್ ಕ್ಲಬ್ ನ 49ನೇ ವಾರ್ಷಿಕೋತ್ಸವ ಇತ್ತೀಚೆಗೆ ಕೊಲ್ಲಂಗಾನ ಶ್ರೀಶಾರದಾಂಬ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಿಕ್ಷಕ ಬ್ರಹ್ಮಶ್ರೀ ತಂತ್ರಿ ಉಳಿಯ ವಿಷ್ಣು ಆಸ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಸಮಾಜ ವ್ಯವಸ್ಥೆಯ ಬೆಳವಣಿಗೆಗಳ ಹಿಂದೆ ಸ್ಥಳೀಯ ಸಂಘಟನೆಗಳ ಪಾತ್ರ ಮಹತ್ತರವಾದುದು. ಯುವ ಸಮೂಹವನ್ನು ಲಕ್ಷ್ಯವಾಗಿರಿಸಿ ಸಂಘಟನೆಗಳು ನಡೆಸುವ ಬಹುಸ್ತರದ ಚಟುವಟಿಕೆಗಳು ಸಮಾಜಾಭ್ಯುದಯಕ್ಕೆ ಶಕ್ತಿ ನೀಡಿ ಪರಿಪೋಶಿಸುತ್ತದೆ. ಸುಧೀರ್ಘ ಕಾಲದಿಂದ ಕಾರ್ಯನಿರ್ವಹಿಸುವ ನವರಂಗ ರಂಗಭೂಮಿ ಸಹಿತ ಇತರ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಇನ್ನಷ್ಟು ಬಲಗೊಳ್ಳಲಿ ಎಂದು ಕರೆ ನೀಡಿದರು.
ಶಶಿರೇಖಾ ಶ್ರೀನಾಥ್ ಕೊಲ್ಲಂಗಾನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ನಿವೃತ್ತ ವಾಯು ಸೇನಾಧಿಕಾರಿ ತಿರುಮಲೇಶ್ವರ ಭಟ್ ಪಜ್ಜ ಶುಭಾಶಂಸನೆಗೈದರು. ನಿವೃತ್ತ ರೈಲ್ವೇ ಅಧಿಕಾರಿ ಐತ್ತಪ್ಪ ನಾಯ್ಕ ಮರ್ದಂಬೈಲು, ಶಾರದಾ ಮಂದಿರದ ಅಧ್ಯಕ್ಷ ಶ್ರೀಶರಾಜ ಶೆಟ್ಟಿ ಕೊಲ್ಲಂಗಾನ, ಕಜಳ ಶ್ರೀಚಾಮುಂಡೇಶ್ವರಿ ಕ್ಷೇತ್ರದ ವ್ಯವಸ್ಥಾಪಕ ಕೃಷ್ಣ ನಾಯ್ಕ ಕಜಳ ಉಪಸ್ಥಿತರಿದ್ದರು. ರವಿಶಂಕರ ಶೆಟ್ಟಿ ಕೊಲ್ಲಂಗಾನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉದಯ ಆಚಾರ್ಯ ಕೊಲ್ಲಂಗಾನ ವಂದಿಸಿದರು. ಅಂಚೆ ಇಲಾಖೆ ನಿವೃತ್ತ ಅಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.ಬಳಿಕ ನೃತ್ಯ ವೈವಿಧ್ಯಗಳು ನಡೆಯಿತು.




.jpg)
