ಸಮರಸ ಚಿತ್ರಸುದ್ದಿ: ಕುಂಬಳೆ: ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 65 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶಾಲೆಗೆ 100 ಶೇ. ಫಲಿತಾಂಶ ಬಂದಿದೆ. ಸ್ಮಿತ ವಿ, ರಕ್ಷಾ ಪಿ, ಸಹನ ಕೆ, ಮರಿಯಮತ್ ಶಾನಿಬ, ನವ್ಯಶ್ರೀ ಬಿ, ಮೊಹಮ್ಮದ್ ಫಮೀನ್ ಕೆ.ಎ. ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ನೂರು ಶೇಕಡಾ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.




.jpg)
