ಪೆರ್ಲ: ಕಳೆದ ಏಳು ದಿವಸಗಳಿಂದ ನಡೆದುಬರುತ್ತಿದ್ದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸೋಮವಾರ ಸಂಪನ್ನಗೊಂಡಿತು. ಸೋಮವಾರ ಬೆಳಗ್ಗೆ ಉಷ:ಪೂಜೆಯೊಂದಿಗೆ ಭಂಡಾರ ಇಳಿದು, ಶ್ರಿ ಪಿಲಿಭೂತದ ನೇಮ ಭಕ್ತಿ, ಸಂಭ್ರಮದಿಂದ ನಡೆಯಿತು.
ಭಾನುವರ ಬೆಳಗ್ಗೆ 8.26ರಿಂದ ಮಿಥುನಲಗ್ನ ಮುಹೂರ್ತದಲ್ಲಿ ಅಷ್ಟಬಂಧ ಲೇಫನದೊಂದಿಗೆ ಪರಿಕಲಶಾಭಿಷೇಕ, ಮಧ್ಯಾಹ್ಮನ ಬ್ರಹ್ಮಕಲಶೋತ್ಸವ ನೆರವೇರಿತು. ಸಂಜೆ ರಂಗಪೂಜೆ, ಶ್ರೀ ಬಲಿ, ಶ್ರೀ ಭೂತಬಲಿ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ದಸ್ನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಆಕ್ಷತೆ ನಡೆಯಿತು.
ಮೇ 6ರಿಂದ 12ರ ವರೆಗೆ ಕೀಕಾಂಗೋಡು ನೀಲೇಶ್ವರದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಮೇ 6ರಿಂದ 12ರ ವರೆಗೆ ಬ್ರಹ್ಮಕಲಶೋತ್ಸವ ನೆರವೇರಿತು.





