ಕಾಸರಗೋಡು: ಸ್ವತಂತ್ರ ಕೃಷಿಕರ ಸಂಘದ ಸುವರ್ಣ ಮಹೋತ್ಸವ ಸಮ್ಮೇಳನ ಮೇ 16 ಮತ್ತು 17 ರಂದು ಪಾಲಕ್ಕಾಡ್‍ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 16 ರಂದು ಮಧ್ಯಾಹ್ನ 2 ಗಂಟೆಗೆ ಪ್ರತಿನಿಧಿ ಸಭೆಯೊಂದಿಗೆ ಪ್ರಾರಂಭವಾಗಲಿದೆ. ರೈತ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಸಾರ್ವಜನಿಕ ಸಭೆಮತ್ತು ನಡೆಯಲಿದೆ. ರಾಜ್ಯ ಪರಿಷತ್ತಿನ ಸದಸ್ಯರು ಸಮ್ಮೇಳನವನ್ನು ಪ್ರತಿನಿಧಿಸಲಿದ್ದಾರೆ ಎಂದು ಸ್ವತಂತ್ರ ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಇ.ಅಬೂಬಕರ್ ಹಾಜಿ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಪ್ರಚಾರಾರ್ಥ ಜಿಲ್ಲಾ ನಾಯಕರ ಸಭೆ, ಕ್ಷೇತ್ರ ಮಟ್ಟದ ಸಮಾವೇಶಗಳು, ಪೆÇೀಸ್ಟರ್ ಅಭಿಯಾನ, ಧ್ವಜ ದಿನಾಚರಣೆ, ಪಂಚಾಯಿತಿ ಸಮಾವೇಶಗಳು ಮತ್ತು ಜಿಲ್ಲಾ ನಾಯಕರ ಪಂಚಾಯತ್ ಮಟ್ಟದ ಪ್ರವಾಸ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಪ್ರತಿನಿಧಿಗಳು ಸೇರಿದಂತೆ ಕಾಸರಗೋಡು ಜಿಲ್ಲೆಯ 1000 ಕಾರ್ಯಕರ್ತರು ಸುವರ್ಣ ಮಹೋತ್ಸವ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಎಂ. ಮುನೀರ್ ಹಾಜಿ, ಪ್ರಧಾನ ಸಂಚಾಲಕ ಇಬ್ರಾಹಿಂ ಪಾಲಾಟ್, ಜಿಲ್ಲಾ ಪದಾಧಿಕಾರಿಗಳಾದ ಹಸನ್ ನೇಕಾರ, ಅಬ್ಬಾಸ್ ಬಂದಾಟ್, ಎ.ಬಿ. ಬಶೀರ್ ಪಳ್ಳಂಗೋಡ್, ಪ್ರಚಾರ ಸಮಿತಿ ಅಧ್ಯಕ್ಷ ಎ.ಕೆ. ಜಲೀಲ್ ಬೇವಿಂಜೆ ಉಪಸ್ಥಿತರಿದ್ದರು.




