ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಷನ್ ತಿರುವಾದಿರ" ವಿಶಿಷ್ಟ ಕಾರ್ಯಕ್ರಮ ಜನಾಕರ್ಷಣೆಗೆ ಕಾರನವಯಿತು.
ಓಮನ ರವಿ ಮನ್ನಿಪಾಡಿ, ಪೂರ್ಣಿಮಾ ರಾಜೇಶ್ ಮನ್ನಿಪಾಡಿ, ಅನುಶ್ರೀ, ಶೀಬಾ ಸತೀಶ ಕಾಂತಿಕೆರೆ, ಲತಾ ವಸಂತ ಕಾಂತಿಕೆರೆ, ವಿನಿತಾ ರಾವ್, ಅಶ್ವಿನಿ ಶರತ್, ಡಾ. ಚೈತ್ರ ರವಿ, ಮನ್ನಿಪಾಡಿ, ಡಾ. ಮೃದುಲ ರಾಘವನ್ ಮನ್ನಿಪಾಡಿ, ಅಮಿತಾ ಶರತ್ ಮನ್ನಿಪಾಡಿ, ಸೌಮ್ಯಾಸುನೀಶ್ ಕಾಂತಿಕೆರೆ, ಕುಮಾರಿಯರದ ಧನಶ್ರೀ, ರಮ್ಯಾ ಫ್ಯೂಷನ್ ತಿರುವಾದಿರಕ್ಕೆ ಹೆಜ್ಜೆಹಾಕಿದರು. ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಯ ಸ್ಕಂದಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಖ್ಯಾತ ರಂಗಭೂಮಿ ನಟ, ನಿರ್ದೇಶಕ ಉದಯಕುಮಾರ್ ಮನ್ನಿ ಪಾಡಿ ಕಾರ್ಯಕ್ರಮ ನಿರ್ದೇಶಿಸಿದ್ದರು. ರವಿ ಮಣಿಯಾಣಿ, ಕುಞÂರಾಮಮಣಿಯಾಣಿ, ರಾಘವ ಮನ್ನಿಪಾಡಿ, ಜಯಕುಮಾರ್ ಮನ್ನಿಪಾಡಿ ನೇತ್ರತ್ವದಲ್ಲಿ ಕಾರ್ಯಕ್ರಮ ಜರುಗಿತು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಕಲಾವಿದರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.





