ಮಧೂರು: ಬಂಟರ ಸಂಘ ಮಧೂರು ಸಮಿತಿ ವತಿಯಿಂದ ಸಮಾಜ ಬಾಂಧವರ ಸಹಕಾರದಿಂದ ಮಧೂರು ಸಮೀಪದ ಪರಕ್ಕಿಲದಲ್ಲಿರುವ ಮಧೂರು ಬಂಟರ ಸಂಘದ ಸ್ಥಳದಲ್ಲಿ ನಿರ್ಮಿಸಲಾದ ನೂತನ ಅಡುಗೆ ಮನೆ ಹಾಗೂ ಸಭಾ ಭವನದ ಉದ್ಘಾಟನಾ ಸಮಾರಂಭ ನೆರವೇರಿತು.
ಮಧೂರು ಮಹಿಳಾ ಬಂಟರ ಸಂಘದ ಕಾರ್ಯಧ್ಯಕ್ಷೆ ಶ್ಯಾಮಲಾ ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಕೊಡುಗೈ ದಾನಿ ಖ್ಯಾತ ನಾಟಿ ವೈದ್ಯೆ ಡಾ. ಯಮುನಾ ಎಸ್ ಶೆಟ್ಟಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ, ವಿಜಯಲಕ್ಷ್ಮಿ ರಾಮಕೃಷ್ಣ ಆಳ್ವ ಹಾಗೂ ರಮಾ ನಾರಾಯಣ ರೈ, ಕುಂದಿಲ, ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಬಂಟರ ಸಂಘದ ಕೂಡ್ಲು ಘಟಕದ ಸ್ಥಾಪಕ ಅಧ್ಯಕ್ಷ, ಹಿರಿಯ ವಕೀಲ ಹರಿದಾಸ ಮಹಾಬಲ ಶೆಟ್ಟಿ ಪ್ರವೇಶೋತ್ಸವಕ್ಕೆ ಚಾಲನೆ ನೀಡಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ವಕೀಲ ಸದಾನಂದ ರೈ ಅವರು ನೂತನವಾಗಿ ನಿರ್ಮಿಸಲಾದ ಅಡುಗೆ ಮನೆಯ ನಾಮ ಫಲಕವನ್ನು ಅನಾವರಣ ಗೊಳಿಸದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರ ಅಧ್ಯತೆಯಲ್ಲಿ ಸಭಾ ಕಾಯ್ಕ್ರಮ ನಡೆಯಿತು. ವಕೀಲರಾದ ಸದಾನಂದ ರೈ, ಮಹಾಬಲ ಶೆಟ್ಟಿ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚಿಕ್ಕಾಡ್, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ಉಪಸ್ಥಿತರಿದ್ದರು. ಮಧೂರು ಮಹಿಳಾ ಬಂಟರ ಸಂಘದ ಕಾರ್ಯಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ಕುದ್ರೆಪ್ಪಾಡಿ ಸ್ವಾಗತಿಸಿದರು ಮಧೂರು ಬಂಟರ ಸಂಘದ ಕಾರ್ಯದರ್ಶಿ ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ಅಡಪ ವಂದಿಸಿದರು.





