ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ಕಾಮಗಾರಿಯ ನಡುವೆ ಕಾಸರಗೊಡಿನ ಚೆರುವತ್ತೂರಿನಲ್ಲಿ ಗುಡ್ಡ ಕುಸಿದು ಕಾರ್ಮಿಕ ಮೃತಪಟ್ಟಿದ್ದು, ಮಣ್ಣಿನಡಿಯಲ್ಲಿ ಸಿಲುಕಿದ ಇಬ್ಬರನ್ನು ಪೆÇೀಲೀಸರು ಮತ್ತು ಅಗ್ನಿಶಾಮಕ ದಳದ ಸಕಾಲಿಕ ಪ್ರಯತ್ನದಿಂದ ರಕ್ಷಿಸಲಾಗಿದೆ. ಗಾಯಗೊಂಡಿರುವ ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಸ್ತೆ ಷಟ್ಪಥ ಕಾಮಗಾರಿ ನಡೆಯುವ ಮಧ್ಯೆ ಚೆರುವತ್ತೂರು ಮಟ್ಟಾಯಿ ಎಂಬಲ್ಲಿ ಈ ದುರಂತ ಸಂಭವಿಸಿದೆ. ಕೋಲ್ಕತ ನಿವಾಸಿ ಮುಮ್ತಾಸ್ ಮೀರ್(18)ಮೃತಪಟ್ಟವರು. ಮುನ್ನಾಲ್ ಲಷ್ಕರ್, ಮೋಹನ್ ತೇಜರ್ ಗಾಯಗೊಂಡ ಇತರ ಕಾರ್ಮಿಕರಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಕಾಮಗಾರಿ ನಡೆಯುತ್ತಿರುವ ಮಧ್ಯೆ ಭಾರಿಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದಿತ್ತು. ಚೆರ್ಕಳದಿಂದ ನೀಲೇಶ್ವರ ವರೆಗೆ ನಡೆಯುತ್ತಿರುವ ಷಟ್ಪvಥ ಕಾಮಗಾರಿಯ ಎರಡನೇ ರೀಚ್‍ನಲ್ಲಿ ದುರಂತ ಸಂಭವಿಸಿದೆ. ಗುಡ್ಡ ಕುಸಿತದ ಮಾಹಿತಿ ಪಡೆದ ಪೆÇೀಲೀಸ್, ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ.ಮಳೆಗಾಲಕ್ಕೂ ಮೊದಲೇ ಉಂಟಾಗಿರುವ ದುರಂತದಿಂದ ಕಾಮಗಾರಿಯಲ್ಲಿ ನಿರತರಾಗಿರುವ ಕಾರ್ಮಿಕರು ಹಾಗೂ ಈ ಪ್ರದೇಶದ ಜನರಲ್ಲಿ ಆತಂಕ ಮನೆಮಾಡಿದೆ.
ದುರಂತದ ಬಗ್ಗೆ ಜಿಲ್ಲಾ ಉಸ್ತುವಾರಿ, ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ. ಶಶೀಂದ್ರನ್ ಅವರು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಅಗತ್ಯ ನಿರ್ದೇಶನ ನೀಡಿದ್ದಾರೆ. ದುರಂತ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯಭರತ್ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಉಮೇಶ್ ಗಢ್, ಚೆರುವತ್ತೂರು ಗ್ರಾಪಂ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ತೃಕರಿಪುರ ಗ್ರಾಪಂ ಅಧ್ಯಕ್ಷೆ ವಿ.ಕೆ.ಬಾವ, ಪಿಲಿಕೋಡು ಗ್ರಾ.ಪಂ.ಅಧ್ಯಕ್ಷೆ ಪಿ.ಪಿ.ಪ್ರಸನ್ನಕುಮಾರಿ, ಮೊದಲಾದವರು ಭೇಟಿ ನೀಡಿದರು.
ಸ್ಥಳ ಸಂದರ್ಶನ ನಡೆಸಿ, ತಜ್ಞರ ವರದಿ ನೀಡುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.





