ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಬಣೂರು ಬನತ್ತಡಿ ಎಂಬಲ್ಲಿ ಮನೆ ಮನೆಕೆಲಸಕ್ಕಾಗಿ ಕಲ್ಲುಸಾಗಿಸುತ್ತಿದ್ದಾಗ ಆಯತಪ್ಪಿ ಕಲ್ಲು ಮೈಮೇಲೆ ಬಿದ್ದ ಪರಿಣಾಮ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ.
ಜೋಡುಕಲ್ಲು ನವೋದಯ ನಗರ ನಿವಾಸಿ ಕಿಟ್ಟುಪುರುಷ ಎಂಬವರ ಪುತ್ರ ಶಶಿಧರ ಜೆ(32)ಮೃತಪಟ್ಟ ಯುವಕ. ಮನೆ ಮೇಲಂತಸ್ತಿಗೆ ಕಲ್ಲು ಸಾಗಿಸುತ್ತಿದ್ದಾಗ ದುರ್ಘಟನೆ ನಡೆದಿದೆ. ಗಾಯಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




