HEALTH TIPS

ರಫ್ತು ಪ್ರಮಾಣ ಶೇ 6.1ರಷ್ಟು ಏರಿಕೆ

ನವದೆಹಲಿ: 2024-25ರ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ಮೌಲ್ಯ ₹69.81 ಲಕ್ಷ ಕೋಟಿಯಷ್ಟಾಗಿದೆ (825 ಬಿಲಿಯನ್‌ ಡಾಲರ್) ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಗುರುವಾರ ತಿಳಿಸಿದೆ.

2023-24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹65.85 ಲಕ್ಷ ಕೋಟಿಯಷ್ಟಿತ್ತು.

ಜಾಗತಿಕ ಅನಿಶ್ಚಿತ ಸ್ಥಿತಿಯ ನಡುವೆಯೂ ರಫ್ತು ಪ್ರಮಾಣದಲ್ಲಿ ಶೇ 6.1ರಷ್ಟು ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ ಎಂದು ಹೇಳಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಸೇವೆಗಳ ರಫ್ತು ಪ್ರಮಾಣ ಶೇ 13ರಷ್ಟು ಏರಿಕೆಯಾಗಿದ್ದು, ಒಟ್ಟು ಮೌಲ್ಯ ₹32.79 ಲಕ್ಷ ಕೋಟಿಯಾಗಿದೆ. ಮಾರ್ಚ್‌ನಲ್ಲಿ ಸೇವಾ ವಲಯದ ರಫ್ತು ಮೌಲ್ಯ ₹3 ಲಕ್ಷ ಕೋಟಿಯಷ್ಟಾಗಿದೆ. ಹಿಂದಿನ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಳವಾಗಿದೆ. ದೂರಸಂಪರ್ಕ, ಕಂಪ್ಯೂಟರ್, ಸಾರಿಗೆ, ಪ್ರಯಾಣ ಮತ್ತು ಹಣಕಾಸು ಸೇವೆಗಳ ವಲಯವು ರಫ್ತು ಏರಿಕೆಗೆ ಕೊಡುಗೆ ನೀಡಿವೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries