HEALTH TIPS

GST ಸಾರ್ವಕಾಲಿಕ ದಾಖಲೆ: ಏಪ್ರಿಲ್ ತಿಂಗಳಲ್ಲಿ 2.36 ಲಕ್ಷ ಕೋಟಿ ರೂ ಸಂಗ್ರಹ

ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹ ಸಾರ್ವಕಾಲಿಕ ದಾಖಲೆ ಬರೆದಿದ್ದು, 2.36 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 12.6 ರಷ್ಟು ಹೆಚ್ಚಾಗಿದೆ.

ಏಪ್ರಿಲ್ ನಲ್ಲಿ ಒಟ್ಟು ಜಿಎಸ್ ಟಿ ಆದಾಯ 2.36 ಲಕ್ಷ ಕೋಟಿ ರೂಪಾಯಿ ಸಂಗ್ರವಾಗಿದ್ದು, ಇದು ಕಳೆದ ವರ್ಷದ ಏಪ್ರಿಲ್ ನಲ್ಲಿ ಸಂಗ್ರಹವಾಗಿದ್ದ 2.10 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 12.6 ರಷ್ಟು ಹೆಚ್ಚಳವಾಗಿದೆ.

ದೇಶೀಯ ವಹಿವಾಟುಗಳಿಂದ ಬರುವ ಒಟ್ಟು ಆದಾಯವು ಶೇ. 10.7 ರಷ್ಟು ಹೆಚ್ಚಾಗಿ 1.89 ಲಕ್ಷ ಕೋಟಿ ರೂ. ಗೆ ತಲುಪಿದ್ದರೆ, ಆಮದುಗಳಿಂದ ಬರುವ ಆದಾಯವು ಶೇ. 21 ರಷ್ಟು ಹೆಚ್ಚಾಗಿ 46,900 ಕೋಟಿ ರೂ. ಗಳಿಗೆ ತಲುಪಿದೆ. ಒಟ್ಟು ಮರುಪಾವತಿಗಳು ಶೇ. 48 ರಷ್ಟು ಹೆಚ್ಚಾಗಿ 27,341 ಕೋಟಿ ರೂ. ಗಳಿಗೆ ತಲುಪಿದೆ.

ಮರುಪಾವತಿಗಳನ್ನು ಸರಿ ಹೊಂದಿಸಿದ ನಂತರ ನಿವ್ವಳ ಜಿಎಸ್ ಟಿ ಸಂಗ್ರಹವು ಸರಾಸರಿ ಶೇ 9.5 ರಷ್ಟು ಹೆಚ್ಚಾಗಿ ಜಿಎಸ್ಟಿಯ ಬೆಳವಣಿಗೆಯ ಸಾಮರ್ಥ್ಯದ ಶುದ್ಧತ್ವವನ್ನು ತೋರಿಸುತ್ತದೆ. ಹೊಸ ಹಣಕಾಸು ವರ್ಷದಲ್ಲಿ ನಿವ್ವಳ ಆದಾಯವು ಸರಾಸರಿ ಶೇ. 8.6 ರಷ್ಟು ಬೆಳವಣಿಗೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ನಿವ್ವಳ ಜಿಎಸ್‌ಟಿ ಸಂಗ್ರಹವು 2 ಲಕ್ಷ ಕೋಟಿ ರೂ. ದಾಟಿರುವುದು ಹಿಂದಿನ ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ಬಲವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಏಕೆಂದರೆ ಇದು ಮಾರ್ಚ್ 25ರಲ್ಲಿ ಸರಕು ಮತ್ತು ಸೇವೆಗಳಲ್ಲಿನ ವಹಿವಾಟುಗಳಿಗೆ ಸಂಬಂಧಿಸಿದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ಅವರು ಹೇಳಿದ್ದಾರೆ.

ಕರ್ನಾಟಕ 2ನೇ ಸ್ಥಾನ

ರಾಜ್ಯವಾರು ಸಂಗ್ರಹವನ್ನು ಗಮನಿಸಿದರೆ, ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಕಾರಾತ್ಮಕ ಬೆಳವಣಿಗೆಯನ್ನು ತೋರಿವೆ. ಕೇವಲ ಬೆರಳೆಣಿಕೆಯಷ್ಟು ರಾಜ್ಯಗಳು ಮಾತ್ರ ಏಕ-ಅಂಕಿಯ ಹೆಚ್ಚಳವನ್ನು ಕಂಡಿವೆ. ದೊಡ್ಡ ರಾಜ್ಯಗಳಲ್ಲಿ, ಹರಿಯಾಣ (16%), ಬಿಹಾರ (15%), ಗುಜರಾತ್ (13%) ಮತ್ತು ತಮಿಳುನಾಡು (13%) ಜಿಎಸ್‌ಟಿ ಆದಾಯದ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿವೆ.

ಮಹಾರಾಷ್ಟ್ರವು ₹41,465 ಕೋಟಿ (11% ಬೆಳವಣಿಗೆ) ಸಂಗ್ರಹಿಸುವ ಮೂಲಕ ಅಗ್ರ ಕೊಡುಗೆದಾರನಾಗಿ ಉಳಿದಿದೆ, ನಂತರ ಕರ್ನಾಟಕ (₹17,815 ಕೋಟಿ, 12%) ಮತ್ತು ತಮಿಳುನಾಡು (₹13,831 ಕೋಟಿ, 13%). ಉತ್ತರ ಪ್ರದೇಶ (₹13,609 ಕೋಟಿ, 11%) ಮತ್ತು ಗುಜರಾತ್ (₹14,705 ಕೋಟಿ, 12%) ಸಹ ಬಲವಾದ ವೇಗವನ್ನು ಕಾಯ್ದುಕೊಂಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries