ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್‌ಫೋನ್ ಹೊಂದಿರುತ್ತಾರೆ. ಸ್ಮಾರ್ಟ್‌ಫೋನ್ ಇಲ್ಲದ ವ್ಯಕ್ತಿಗಳು ಸಿಗುವುದೇ ಕಷ್ಟ ಎನ್ನುವಂತಹ ವಾತಾವರಣ ಇದೆ. ಇಂದಿಗ 5ಜಿ ಯುಗದಲ್ಲಿ ಸ್ಮಾರ್ಟ್‌ಫೋನ್ ಜೊತೆಗೆ ಪ್ರತಿಯೊಬ್ಬರು ಕೂಡ ಅನ್‌ಲಿಮಿಟೆಡ್ ಡೆಟಾ ಹೊಂದಿರುತ್ತಾರೆ.
ಮೊಬೈಲ್ ತುಂಬಾ ಉಪಯುಕ್ತ ಸಾಧನ ಎಂಬುದು ಗೊತ್ತಿರುವ ಸಂಗತಿ. ನಿಮಗೆ ಒಂದು ಪ್ರಮುಖ ಮೆಸೇಜ್ ಸ್ವೀಕರಿಸಬೇಕಾದರೆ ಅಥವಾ ಕೆಲಸವಿದ್ದರೆ, ನೀವು ಖಂಡಿತವಾಗಿಯೂ ಡೇಟಾವನ್ನು ಆನ್‌ನಲ್ಲಿ ಇರಿಸಬಹುದು. ಆದಾಗ್ಯೂ, ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುವುದರಿಂದ ನಿಮ್ಮ ಫೋನ್‌ಗೆ ಹಾನಿ ಉಂಟಾಗುತ್ತದೆ.
ಸ್ಮಾರ್ಟ್‌ಫೋನ್ ಬಳಕೆದಾರರು ಇಂಟರ್ನೆಟ್ ಸಂಪರ್ಕ ಹೊಂದಿರುವುದು ಸಾಮಾನ್ಯ ಸಂಗತಿ. ಡೇಟಾ ಇಲ್ಲದೆ ಸ್ಮಾರ್ಟ್‌ಫೋನ್ ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವು ಜನರು ಇಂಪಾರ್ಟೆಟ್ ಮೆಸೇಜ್ ಬಂದ ತಕ್ಷಣ ಪ್ರತ್ಯುತ್ತರಿಸಲು ತಮ್ಮ ಫೋನ್‌ಗಳನ್ನು ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುತ್ತಾರೆ, ಇನ್ನು ಕೆಲವರು ಕೆಲಸದ ನಂತರ ಡೇಟಾವನ್ನು ಆಫ್ ಮಾಡುತ್ತಾರೆ. ಹಾಗಾದರೆ, ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡಬೇಕೇ ಅಥವಾ ಬೇಡವೇ?. ಎಂಬುದರ ಕಂಪ್ಲೀಟ್ ಮಾಹಿತಿ ನಾವು ಇಲ್ಲಿ ಕೊಡ್ತೀವಿ ನೋಡಿ
ಚಾರ್ಜ್ ಖಾಲಿಯಾಗುವಿಕೆ: ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದರಿಂದ ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಮುಖ್ಯವಾಗಿ ನೀವು ನಿಯಮಿತವಾಗಿ ಇಂಟರ್ನೆಟ್ ಬಳಸುವ ಅಪ್ಲಿಕೇಶನ್‌ಗಳನ್ನು ಬ್ಯಾಕ್ಗ್ರೌಂಡ್ ರನ್ನಿಂಗ್ನಲ್ಲಿ ಇಟ್ಟಿದ್ದರೆ ಬ್ಯಾಟರಿ ಬೇಗನೆ ಖಾಲಿ ಆಗುತ್ತದೆ.
ಮೊಬೈಲ್ ಬ್ಯಾಟರಿಗೆ ಹಾನಿ: ಇಂಟರ್ನೆಟ್ ಅನ್ನು ಯಾವಾಗಲು ಆನ್ ಇಡುವುದರಿಂದ ಪ್ರಮುಖವಾಗಿ ನಿಮ್ಮ ಮೊಬೈಲ್ ಬ್ಯಾಟರಿ ಖಾಲಯಾಗುವುದು ಮಾತ್ರವಲ್ಲ. ಬ್ಯಾಟರಿ ಹಾನಿ ಕೂಡ ಉಂಟಾಗುತ್ತದೆ. ಬ್ಯಾಟರಿ ತನ್ನ ಸಾಮರ್ಥ್ಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಡೇಟಾ ಖಾಲಿಯಾಗುವಿಕೆ: ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿರುವುದರಿಂದ ನಿಮ್ಮ ಡೇಟಾ ಪ್ಲಾನ್ ಅಂದುಕೊಂಡ ಸಮಯಕ್ಕಿಂತ ಬೇಗನೆ ಖಾಲಿಯಾಗುತ್ತದೆ. ಇದರಿಂದ
ನಿಮ್ಮ ಅಗತ್ಯದ ಸಂದರ್ಭದಲ್ಲಿ ಡೇಟಾ ಬೇಕು ಅಂದ್ರೆ ಇರುವುದಿಲ್ಲ.
ಭದ್ರತಾ ಅಪಾಯಗಳು: ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ಅದು ನಿಮ್ಮ ಸಾಧನವನ್ನು ಮಾಲ್‌ವೇರ್, ವೈರಸ್‌ಗಳು ಮತ್ತು ಹ್ಯಾಕರ್‌ಗಳಿಗೆ ಒಡ್ಡಿಕೊಳ್ಳಬಹುದು, ಮಾತ್ರವಲ್ಲ ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಬಹುದು. ಏಕೆಂದರೆ ನಿಮ್ಮ ಫೋನ್ ಯಾವಾಗಲೂ ಇಂಟರ್ನೆಟ್‌ಗೆ ಸಂಪರ್ಕದಲ್ಲಿರುತ್ತದೆ ಮತ್ತು ನಿಮ್ಮ ಫೋನ್ ಅಥವಾ ಅಪ್ಲಿಕೇಶನ್‌ಗಳ ಮೂಲಕ ಇಂಟರ್ನೆಟ್‌ನ ಲಾಭವನ್ನು ಪಡೆಯಬಹುದು.
ಲೊಕೇಷನ್ ಅಥವಾ ಪರ್ಸನಲ್ ಡೇಟಾ ಟ್ರ್ಯಾಕಿಂಗ್: ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ನಿಮ್ಮ ಸಾಧನವು ನಿರಂತರವಾಗಿ ಡೇಟಾವನ್ನು ಕಳುಹಿಸುತ್ತಿರುತ್ತದೆ ಮತ್ತು ಸ್ವೀಕರಿಸುತ್ತಿರುತ್ತದೆ, ಇದನ್ನು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು, ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಬಳಸಬಹುದು.






