ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಬಳಸಲಾಗುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ವಾಟ್ಸಾಪ್ ಬಳಸುತ್ತಾರೆ. ಬಳಕೆದಾರರ ಗೌಪ್ಯತೆಗೆ ವಾಟ್ಸಾಪ್ ಹಲವು ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರಲ್ಲಿ ಒಂದು ವೈಶಿಷ್ಟ್ಯವೆಂದರೆ 'ಡಿಲೀಟ್ ಫಾರ್ ಎವರಿವನ್' (Delete for Everyone).
ತಪ್ಪಾಗಿ ಕಳುಹಿಸಲಾದ ಮೆಸೇಜ್ ಅನ್ನು ಅಳಿಸಲು ಡಿಲೀಟ್ ಫಾರ್ ಎವರಿವನ್ ಬಳಸುತ್ತಾರೆ. ಕಳುಹಿಸುವವರಿಗೆ ತಪ್ಪಾಗಿ ಕಳುಹಿಸಿದ ಸಂದೇಶಗಳನ್ನು ತೆಗೆದುಹಾಕಬಹುದು. ನೀವು ಸಂದೇಶ ಕಳುಹಿಸುತ್ತಿರುವ ವ್ಯಕ್ತಿಗೆ ಓದುವ ಮೊದಲೇ ಈ ಮೆಸೇಜ್ ಡಿಲೀಟ್ ಮಾಡಿದ್ರೆ, ಅದನ್ನು ಓದಲು ಕೂಡ ನಿಮಗೆ ಸಾಧ್ಯವಿಲ್ಲ.
ಅಳಿಸಿದ ಸಂದೇಶಗಳಲ್ಲಿ ಏನು ಬರೆಯಲಾಗಿದೆ ಎಂದು ಅನೇಕ ಜನರು ತಿಳಿದುಕೊಳ್ಳಲು ಬಯಸುತ್ತಾರೆ. ಅಂತಹ ಅಳಿಸಿದ ಸಂದೇಶಗಳನ್ನು ವೀಕ್ಷಿಸಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವು ಅಪ್ಲಿಕೇಶನ್ ಗಳಿವೆ. ಆ ಆಪ್ ಮೂಲಕ ನೀವು ಅಳಿಸಿದ ಸಂದೇಶಗಳನ್ನು ಓದಬಹುದು.
ಆ ಅಪ್ಲಿಕೇಶನ್ ಗಳನ್ನು ಬಳಸುವುದರಿಂದ ಕೆಲವೊಮ್ಮೆ ನಿಮ್ಮ ಪ್ರಮುಖ ಮಾಹಿತಿಯನ್ನು ಕದಿಯುವ ಅಪಾಯವಿದೆ. ಹೀಗಾಗಿ ಇಲ್ಲಿ ನಾವು ಅನೇಕರಿಗೆ ತಿಳಿಯದ ಒಂದು ವಿಶೇಷ ವಿಧಾನದ ಬಗ್ಗೆ ಹೇಳುತ್ತೇವೆ. ಇದು ಅಪ್ಲಿಕೇಶನ್ ಗಳಿಲ್ಲದೆ ಸಂದೇಶಗಳನ್ನು ಓದಲು ನಿಮಗೆ ಸಾಧ್ಯವಾಗಿಸುತ್ತೆ.
ಮೊದಲನೆಯದಾಗಿ ಈ ವೈಶಿಷ್ಟ್ಯವು ಂಟಿಜಡಿoiಜ 11 ಮತ್ತು ಅದಕ್ಕಿಂತ ಹೆಚ್ಚಿನದಕ್ಕೆ ಮಾತ್ರ ಲಭ್ಯವಿದೆ. ಆದ್ದರಿಂದ ಮೊದಲು ಫೋನ್ ಆವೃತ್ತಿಯನ್ನು ಪರಿಶೀಲಿಸಿ ಮತ್ತು ಫೋನ್ ಅನ್ನು ಅಪ್ಡೇಟ್ ಮಾಡಿ.
ಮೊದಲು, ಫೋನ್ ಸೆಟ್ಟಿಂಗ್ ಗಳಿಗೆ ಹೋಗಿ. ಮುಂದೆ ನೋಟಿಫಿಕೇಷನ್ ಗೆ ಹೋಗಿ. ಮುಂದೆ, ಇನ್ನಷ್ಟು ಸೆಟ್ಟಿಂಗ್ ಗಳು ಬರುತ್ತೆ. ಹಾಗೇ ಅಲ್ಲೇ ನೋಟಿಫಿಕೇಷನ್ ಹಿಸ್ಟರಿ ಇತಿಹಾಸವನ್ನು ಪರಿಶೀಲಿಸಿ.
ಸ್ಕ್ರೀನ್ ಮೇಲೆ ಗೋಚರಿಸುವ ಟಾಗಲ್ ಒತ್ತಿರಿ. ಈ ಬಟಲ್ ಒತ್ತುವ ಮೂಲಕ ನೀವು ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದಾಗ, ಕಳೆದ 24 ಗಂಟೆಗಳಲ್ಲಿ ನಿಮ್ಮ ಫೋನ್‌ನಲ್ಲಿ ನೀವು ಸ್ವೀಕರಿಸಿದ ಎಲ್ಲಾ ಸಂದೇಶಗಳನ್ನು ನೀವು ನೋಡಲು ಸಾಧ್ಯವಾಗುತ್ತದೆ. ಜೊತೆಗೆ "ಡಿಲೀಟ್" ಎಂಬ ಸಂದೇಶವೂ ಇರುತ್ತದೆ. ಆದರೆ ನೀವು ಫೋಟೋಗಳು, ವೀಡಿಯೊಗಳು ಅಥವಾ ಆಡಿಯೋ ಸಂದೇಶಗಳನ್ನು ವೀಕ್ಷಿಸಲು ಸಾಧ್ಯವಿಲ್ಲ. ನೀವು ಟೆಕ್ಸ್ಟ್ ಸಂದೇಶಗಳನ್ನು ಮಾತ್ರ ವೀಕ್ಷಿಸಬಹುದು.
ಮೆಟಾ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ವರ್ಷ ಮೆಸೇಜ್ಗೆ ಎಮೋಜಿ ರಿಯಾಕ್ಷನ್ನಿಂದ ಹಿಡಿದು ಮೆಸೇಜ್ ಡಿಲೀಟ್ ಮಾಡುವ ಸಮಯವನ್ನು ಹೆಚ್ಚಿಸಿ ಇನ್ನು ಕೆಲವೇ ದಿನಗಳಲ್ಲಿ ಲಾಗೌಟ್ ಆಯ್ಕೆ, ಗ್ರೂಪ್ ಅಡ್ಮಿನ್ಗೆಮೆಸೇಜ್ ಡಿಲೀಟ್ ಮಾಡುವ ಆಯ್ಕೆ, ಕಳುಹಿಸಿದ ಮೆಸೇಜ್ ಎಡಿಟ್ ಮಾಡುವ ಆಯ್ಕೆ ಹೀಗೆ ಅನೇಕ ಫೀಚರ್ಗಳನ್ನು ಪರಿಚಯಿಸಿದೆ.






