ಕೈಯಲ್ಲಿ ಮೊಬೈಲ್, ಕೆಲಸದಲ್ಲಿ ಕಂಪ್ಯೂಟರ್ ಇಲ್ಲದಿದ್ರೆ ಈ ಆಧುನಿಕ ಜಗತ್ತಿನಲ್ಲಿ ಉದ್ಯೋಗ ಮಾಡುವುದು ಕಷ್ಟ. ಈಗಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸುತ್ತಾರೆ. ಹಾಗಾದ್ರೆ ನಿಮ್ಮ ಸಾಮಾನ್ಯ ಜ್ಞಾನ ಎಷ್ಟಿದೆ ಎಂದು ತಿಳಿಯೋಣ. ನಿಮ್ಮ ಕಂಪ್ಯೂಟರ್ನಲ್ಲಿನ ಕೀ ಬೋರ್ಡ್ನಲ್ಲಿ ಸ್ಪೇಸ್ ಬಾರ್ ಕೀ ಯಾಕೆ ಅಷ್ಟು ದೊಡ್ಡದಿದೆ ಗೊತ್ತಾ? ಕೀ ಬೋರ್ಡ್ನಲ್ಲಿ ಎಲ್ಲಾ ಕೀಗಳು ಎಲ್ಲಾ ಬಟನ್ಗಳು ಸಾಮಾನ್ಯವಾಗಿ ಒಂದೇ ಸಮ ಇದ್ದರೆ, ಸ್ಪೇಸ್ ಬಾರ್ ಮಾತ್ರ ದೊಡ್ಡದಿರುತ್ತೆ. ಇದು ಯಾಕೆ ಗೊತ್ತಾ?
ಕೀಬೋರ್ಡ್‌ನಲ್ಲಿರುವ ಸ್ಪೇಸ್ ಕೀ ಯಾಕೆ ಇಷ್ಟೊಂದು ದೊಡ್ಡದಾಗಿದೆ? ಎಂಬ ಪ್ರಶ್ನೆ ಕೇಳಿದ್ದರೆ. ಸಾಮಾನ್ಯವಾಗಿ 99% ಜನರಿಗೆ ಈ ಉತ್ತರ ಗೊತ್ತಿರುವುದಿಲ್ಲ. ಇದಕ್ಕೆ ಹಲವರು ತಪ್ಪು ಉತ್ತರ ನೀಡುತ್ತಾರೆ. ಆದ್ರೆ ನಿಮಗೆ ಈ ಉತ್ತರ ಗೊತ್ತಾದರೆ ದೊಡ್ಡ ಆಶ್ಚರ್ಯ ಪಡುತ್ತೀರಿ.
ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿನ ಸ್ಪೇಸ್ ಬಾರ್ ಇತರ ಅಕ್ಷರ ಕೀಗಳಿಗಿಂತ ಹೆಚ್ಚು ದೊಡ್ಡದಾಗಿದೆ ಮತ್ತು ಉದ್ದವಾಗಿದೆ. ಇದು ಯಾಕೆ ಹೀಗಿದೆ ಎಂದು ನೀವು ಎಂದಾದರೂ ಯೋಚನೆ ಮಾಡಿದ್ದೀರಾ?. ಈಗಿನ ಜೀವನ ಶೈಲಿಯಲ್ಲಿ ಕಚೇರಿ ಕೆಲಸವಾಗಿರಲಿ ಅಥವಾ ಮನೆಯಲ್ಲಿ ಸಿನಿಮಾ ನೋಡುತ್ತಿರಲಿ, ಲ್ಯಾಪ್‌ಟಾಪ್, ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಇಲ್ಲದೆ ಜೀವನ ಊಹಿಸಲೂ ಸಾಧ್ಯವಿಲ್ಲ. ಈ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ನಮ್ಮ ದೈನಂದಿನ ಸಹಚರರಾಗಿದ್ದಾರೆ. ಆದರೂ ಈ ಪ್ರಸಿದ್ಧ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲದ ಸಾಕಷ್ಟು ಮಾಹಿತಿಗಳು ಇನ್ನೂ ಇವೆ.
ನೀವು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಕೀಬೋರ್ಡ್ ಅನ್ನು ಹತ್ತಿರದಿಂದ ನೋಡಿದರೆ, ಒಂದು ವಿಷಯ ಎಲ್ಲರ ಗಮನವನ್ನು ಸೆಳೆಯುತ್ತದೆ. ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿನ ಸ್ಪೇಸ್ ಬಾರ್ ಇತರ ಅಕ್ಷರ ಕೀಗಳಿಗಿಂತ ಹೆಚ್ಚು ದೊಡ್ಡದಾಗಿದೆ ಮತ್ತು ಉದ್ದವಾಗಿದೆ. ಕೆಲವರು ಇದು ಚೆನ್ನಾಗಿ ಕಾಣಲು ಹೀಗೆ ವಿನ್ಯಾಸ ಮಾಡಲಾಗಿದೆ. ಅಥವಾ ಜಾಗ ಹೆಚ್ಚಿಗೆ ಇತ್ತು ಎಂದು ಹೀಗೆ ಮಾಡಲಾಗಿದ ಎಂದು ಹೇಳಿದ್ದಾರೆ ಆದರೆ ಇದು ತಪ್ಪು.
ಇದು ಆಕಸ್ಮಿಕವಾಗಿಯೋ ಅಥವಾ ಸೌಂದರ್ಯಕ್ಕಾಗಿಯೋ ಸ್ಫೇಸ್ ಬಾರ್ ಕೀಯನ್ನು ದೊಡ್ಡದಾಗಿ ವಿನ್ಯಾಸ ಮಾಡಿಲ್ಲ. ವಿಶೇಷ ಮತ್ತು ಬಹಳ ಮುಖ್ಯವಾದ ಕಾರಣಕ್ಕಾಗಿ ಈ ಸ್ಪೇಸ್ ಬಾರ್ ಅನ್ನು ಇತರ ಎಲ್ಲಾ ಬಟನ್‌ಗಳಿಗಿಂತ ದೊಡ್ಡದಾಗಿ ಮಾಡಲಾಗಿದೆ.
ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ತಿಳುವಳಿಕೆಯನ್ನು ಹೊಂದಿರುವುದು ಅವಶ್ಯಕ. ನೀವು ಉತ್ತೀರ್ಣರಾಗಲು ಬಯಸಿದರೆ ಜಿಕೆ ಚೆನ್ನಾಗಿ ಅಧ್ಯಯನ ಮಾಡುವುದು ಬಹಳ ಮುಖ್ಯ. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು, ಸಾಮಾನ್ಯ ಜ್ಞಾನದ ಸರಿಯಾದ ತಿಳುವಳಿಕೆಯನ್ನು ಹೊಂದಿರುವುದು ಅವಶ್ಯಕ.
ಟೈಪ್ ಮಾಡಲು ಸ್ಪೇಸ್ ಬಟನ್ ಅನ್ನು ದೊಡ್ಡದಾಗಿಸಲಾಗಿದೆ. ಪ್ರತಿಯೊಂದು ಪದದ ನಂತರ ನೀವು ಒಂದು ಜಾಗವನ್ನು ಮಧ್ಯ ಬಿಡಬೇಕು. ಆದ್ದರಿಂದ ಈ ಕೀಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ನೀವು ಸಾಮಾನ್ಯವಾಗಿ ಟೈಪ್ ಮಾಡುವಾಗ ಯಾವುದೇ ಬಟನ್ ಕೂಡ ಸ್ಪೇಸ್ ಕೀ ಅಷ್ಟು ಪದೇ ಪದೇ ಬಳಸುವುದಿಲ್ಲ. ಕೇವಲ ಸ್ಪೇಸ್ ಬಾರ್ ಕೀಯನ್ನು ಮಾತ್ರ ಅತೀ ಹೆಚ್ಚಾಗಿ ಬಳಸ್ತೀರಾ. ಹೀಗಾಗಿ ಟೈಪ್ ಸಲುಭವಾಗಲಿ ಎಂದು ಸ್ಪೇಸ್ ಬಟನ್ ಅನ್ನು ದೊಡ್ಡದಾಗಿಸಲಾಗಿದೆ. ಪ್ರತಿಯೊಂದು ಪದದ ನಂತರ ನೀವು ಒಂದು ಮಧ್ಯ ಜಾಗವನ್ನು ಬಿಡಲು ಇದನ್ನು ಬಳಸುವುದರಿಂದ ಇದನ್ನು ದೊಡ್ಡದಾಗಿ ವಿನ್ಯಾಸ ಮಾಡಲಾಗಿದೆ
ಅತೀ ವೇಗವಾಗಿ ಟೈಪ್ ಮಾಡಲು ಮತ್ತು ಚೆನ್ನಾಗಿ ಟೈಪ್ ಮಾಡಲು ನೀವು ಎರಡು ಕೈಯಿನ ಎಲ್ಲಾ ಬೆರಳುಗಳ ಸಹಾಯ ಪಡೆಯುತ್ತೀರಿ. ಹೀಗಾಗಿ ಸ್ಪೇಸ್ ಬಾರ್ ಪದೇ ಪದೇ ಬಳಸುವ ಅವಶ್ಯಕತೆ ಇರುವುದರಿಂದ ಎರಡು ಕೈಯಿನ ಬೆರಳುಗಳಿಗೆ ಸಹಾಯವಾಗಲಿ ಎಂದು ಸ್ಫೇಸ್ ಬಾರ್ ಕಿಯನ್ನು ದೊಡ್ಡದಾಗಿ ಮಾಡಲಾಗಿದೆ. ಇದರಿಂದ ಸ್ಪೇಸ್ ಕೀಯನ್ನು ಎರಡು ಬೆರಳುಗಳಿಂದ ಸುಲಭವಾಗಿ ಒತ್ತಬಹುದು.
ಇದು ಟೈಪ್ ಮಾಡಲು ಅನುಕೂಲಕರವಾಗಿರುವುದಲ್ಲದೆ, ಟೈಪಿಂಗ್ ವೇಗವೂ ಹೆಚ್ಚು ಮಾಡುತ್ತೆ. ಸ್ಪೇಸ್ ಬಾರ್ ಕೀಲಿಯನ್ನು ಚಿಕ್ಕದಾಗಿಸಿದರೆ, ನಮಗೆ ಸರಿಯಾಗಿ ಟೈಪ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಆ ಕೀಲಿಯನ್ನು ಪದೇ ಪದೇ ಒತ್ತುವುದು ನಮಗೆ ತುಂಬಾ ಕಷ್ಟಕರವಾಗಿರುತ್ತದೆ ಎಂಬ ಚಿಂತನೆಯಿಂದ ದೊಡ್ಡದಾಗಿರಿಸಲಾಗಿದೆ.







