HEALTH TIPS

ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಹಣ್ಣು ಸೇವಿಸಿ: ಲಿವರ್ ಸಮಸ್ಯೆ ದೂರಾಗಿಸಿ!

ವಿಶ್ವದಲ್ಲಿ ಹಲವರು ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಈ ಲಿವರ್ ಸಮಸ್ಯೆ ಕೂಡ ಒಂದಾಗಿದೆ. ಲಿವರ್‌ ಸಮಸ್ಯೆ ಇರುವವರು ತಮ್ಮ ಆರೋಗ್ಯವನ್ನು ಸುಧಾರಿಸಲು ಆಹಾರ ಕ್ರಮವನ್ನು ಸುಧಾರಿಸಿಕೊಳ್ಳುವುದು ಬಹಳ ಮುಖ್ಯ. ಯಕೃತ್ತಿನ ಕಾರ್ಯದಲ್ಲಿ ಅಡಚಣೆಯು ನಿಮ್ಮ ದೇಹದ ಪ್ರಮುಖ ಅಂಗಗಳು ಹಾಗೆ ಸಮತೋಲನ ಹಾಳಾಗಲು ಕಾರಣವಾಗುತ್ತದೆ.


ದೇಹದ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಒಂದಾದ ಯಕೃತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಕೃತ್ತಿನ ಕಾರ್ಯದಲ್ಲಿನ ಸಣ್ಣಪುಟ್ಟ ಅಡಚಣೆಗಳು ಸಹ ದೇಹದಾದ್ಯಂತ ವ್ಯಾಪಕ ಸಮಸ್ಯೆಗಳನ್ನು ಉಂಟುಮಾಡಬಹುದು. ಕೊಬ್ಬಿನಿಂದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ.

ಯುಎಸ್‌ನಲ್ಲಿ ನಡೆಸಿದ ಕ್ಲಿನಿಕಲ್‌ ಅಧ್ಯಯನದಲ್ಲಿ ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದಿದೆ. ಯಕೃತ್ತು ಹಾನಿಯಾಗದೆ ಆರೋಗ್ಯವಾಗಿರಬೇಕಾದರೆ ನೀವು ಸೇಬು ಹಣ್ಣನ್ನು ಸೇವಿಸಬೇಕಾಗುತ್ತದೆ. ಹಾಗೆ ನಿಮ್ಮ ಯಕೃತ್ತು ಆರೋಗ್ಯವಾಗಿರಬೇಕಾದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದರೆ ಬಹಳ ಉತ್ತಮ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಸೇಬು ಹಣ್ಣುಗಳನ್ನು ತಿನ್ನುವುದು ನಿಮ್ಮ ಯಕೃತ್ತಿನ ಆರೋಗ್ಯ ಕಾಪಾಡಲು ಬಹಳ ಮುಖ್ಯ ಹಾಗೂ ಆರೋಗ್ಯಕರ ಮಾರ್ಗವಾಗಿರಲಿದೆ. ಇದರಲ್ಲಿನ ಫೈಬರ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಸೇಬುಗಳು ಯಕೃತ್ತನ್ ನಿರ್ವಿಷಗೊಳಿಸಲು ಮತ್ತು ಕೊಬ್ಬಿನ ಅಂಶ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಲಾನಂತರದಲ್ಲಿ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡಲಿದೆ.

ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ಕೊಬ್ಬಿನ ಯಕೃತ್ತಿನ ಕಾಯಿಲೆಯು ವಿವಿಧ ಲಕ್ಷಣಗಳ ತೋರಿಸಲಿದೆ. ತೂಕ ಇಳಿಸಿಕೊಳ್ಳಲು ಅಮುಂದಾಗುವ ವ್ಯಕ್ತಿ ಲಿವರ್ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಈ ಸಮಯದಲ್ಲಿ ನೀವು ಯಕೃತ್ತಿನಲ್ಲಿ ಶೇಖರಣೆಯಾಗುವ ಕೊಬ್ಬನ್ನ ಕರಗಿಸಕು ಪಥ್ಯ ಮಾಡಬಹುದು. ಅದರಲ್ಲೂ ಖಾಲಿ ಹೊಟ್ಟೆಗೆ ಸೇಬು ಸೇವನೆ ಪ್ರಯೋಜನಕಾರಿಯಾಗಲಿದೆ.

ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆ ಕಾಫಿ ಸೇವನೆ ಮುಖ್ಯವಾಗುತ್ತದೆ. ಆದರೆ ಎಂದಿಗೂ ಹೆಚ್ಚು ಕರಿದ ಆಹಾರ, ಸಕ್ಕರೆ, ಮದ್ಯಪಾನ, ಧೂಮಪಾನ ಮಾಡುವುದನ್ನು ನಿಲ್ಲಿಸುವುದು ಲಿವರ್ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

ಯಕೃತ್ತು ಸಮಸ್ಯೆ ಇರುವವರು ಈ ಆಹಾರ ಸೇವಿಸಬಾರದು

ನೀವು ಮಾಂಸಹಾರಿಯಾಗಿದ್ದು ನಿಮಗೆ ಲಿವರ್ ಸಮಸ್ಯೆ ಇದ್ದರೆ ನೀವು ಮಾಂಸಹಾರ ಸೇವನೆ ನಿಲ್ಲಿಸಬೇಕು. ಹೆಚ್ಚು ಮಾಂಸಾಹಾರ ಸೇವಿಸಿದಾಗ ಹೆಚ್ಚು ಅಮೋನಿಯಾ ಉತ್ಪತ್ತಿಯಾಗುತ್ತದೆ, ಇದನ್ನು ಹೊರ ಹಾಕಲು ಲಿವರ್‌ ಮೇಲೆ ಅಧಿಕ ಒತ್ತಡ ಬೀಳಲಿದೆ. ಹಾಗೆ ಲಿವರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇಲ್ಲವೆ ಈ ಅಮೋನಿಯ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಅತೀಯಾಗಿ ಕೊಬ್ಬು, ಹಾಗೂ ಕ್ಯಾಲೋರಿ ಹೊಂದಿರುವ ಆಹಾರದಿಂದ ನಿಮ್ಮ ತೂಕ ಹೆಚ್ಚಳ ಆಗುತ್ತಿದ್ದರೆ ಆ ಆಹಾರದಿಂದಲೂ ದೂರವೇ ಇರಬೇಕು. ಮುಖ್ಯವಾಗಿ ಬರ್ಗರ್, ಮಟನ್, ಪಿಜ್ಜಾದಂತಹ ಆಹಾರ ಹಾಗೆ ಪ್ಯಾಕ್ ಮಾಡಲಾದ ಸಂಸ್ಕರಿಸಿದ ಆಹಾರಗಳ ಸೇವನೆ ಬಿಡಬೇಕು. ಸಸ್ಯಹಾರಿ ಆಹಾರ ಹಾಗೂ ನಿಯಮಿತ ವ್ಯಾಯಾಮ ಮಾಡಬೇಕು. ಅದರಲ್ಲು ನೀರು ಹೆಚ್ಚು ಸೇವಿಸುವುದು, ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

ಇತ್ತೀಚಿಗೆ ಫ್ಯಾಟಿ ಲಿವರ್ ಸಮಸ್ಯೆ ಅಧಿಕವಾಗಿದೆ. ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ಆಹಾರ ಶೈಲಿಯ ಬದಲಾವಣೆಯಿಂದಾಗಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಾಗಿದೆ. ಲಿವರ್ ಸಮಸ್ಯೆ ಇದ್ದರೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries