ದೀರ್ ಅಲ್-ಬಲಾಹ್ : ಇಸ್ರೇಲ್ ಸೇನೆಯು ಗಾಜಾಪಟ್ಟಿ ಮೇಲೆ ಶುಕ್ರವಾರ ಮತ್ತೆ ದಾಳಿ ನಡೆಸಿದ್ದು ಕನಿಷ್ಠ 64 ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆಸ್ಪತ್ರೆಗಳು ತಿಳಿಸಿವೆ.
ಗುರುವಾರ ತಡರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ದೀರ್ ಅಲ್-ಬಲಾಹ್‌ನ ಹೊರ ವಲಯ ಮತ್ತು ಖಾನ್ ಯೂನಿಸ್ ನಗರ ವ್ಯಾಪ್ತಿಯಲ್ಲಿ ದಾಳಿಗಳು ನಡೆದಿದ್ದು, 48 ಮೃತದೇಹಗಳನ್ನು ಇಂಡೊನೇಷಿಯನ್ ಆಸ್ಪತ್ರೆಗೆ ಕರೆತರಲಾಗಿದೆ.
ಉಳಿದ 16 ಮೃತದೇಹಗಳನ್ನು ನಸ್ಸೆರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಯ ಕುರಿತು ಇಸ್ರೇಲ್ ಸೇನೆಯ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಮಧ್ಯಪ್ರಾಚ್ಯ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ನಾಂದಿ ಹಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇಸ್ರೇಲ್ ಮಧ್ಯಪ್ರಾಚ್ಯದಿಂದ ದೂರ ಉಳಿದ ಕಾರಣ ಕದನ ವಿರಾಮದ ನಿರೀಕ್ಷೆ ಹುಸಿಯಾಗಿದೆ.




