ತಿರುವನಂತಪುರಂ: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪತ್ತನಂತಿಟ್ಟ ಜಿಲ್ಲೆಯ ಮಣಿಮಾಲ, ಅಚ್ಚಂಕೋವಿಲ್, ಪಂಪಾ ಮತ್ತು ಕಾಸರಗೋಡು ಜಿಲ್ಲೆಯ ಮೊಗ್ರಾಲ್, ನೀಲೇಶ್ವರ ಮತ್ತು ಉಪ್ಪಳ ನದಿಗಳಿಗೆ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಪ್ರವಾಹ ಎಚ್ಚರಿಕೆ ನೀಡಿದೆ. ಆರು ನದಿಗಳಿಗೆ ಆರೆಂಜ್ ಎಚ್ಚರಿಕೆ ನೀಡಲಾಗಿದೆ.
ಎರ್ನಾಕುಳಂ ಜಿಲ್ಲೆಯ ಮೂವಾಟ್ಟುಪುಳ, ಕಣ್ಣೂರಿನ ಪೆರುಂಬ ಮತ್ತು ಕುಪ್ಪಂ, ಕಾಸರಗೋಡಿನ ಕಾರ್ಯಂಕೋಡ್, ಕೊಲ್ಲಂನ ಪಲ್ಲಿಕಲ್, ಕೊಟ್ಟಾಯಂನ ಮೀನಚಿಲ್, ಕೋಝಿಕ್ಕೋಡ್‍ನ ಕೊರಪ್ಪುಳ, ತಿರುವನಂತಪುರಂನ ವಾಮನಪುರಂ ಮತ್ತು ವಯನಾಡು ಜಿಲ್ಲೆಯ ಕಬನಿ ನದಿಗಳಿಗೆ ಯೆಲ್ಲೋ ಎಚ್ಚರಿಕೆ ನೀಡಲಾಗಿದೆ.
ಈ ನದಿಗಳ ದಡದಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಮತ್ತು ಯಾವುದೇ ಕಾರಣಕ್ಕೂ ನದಿಗಳನ್ನು ಪ್ರವೇಶಿಸಬಾರದು ಅಥವಾ ದಾಟಬಾರದು ಎಂದು ಎಚ್ಚರಿಸಲಾಗಿದೆ.






