ನವದೆಹಲಿ:₹70 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ಆದಾಯ ತೆರಿಗೆ ಆಯುಕ್ತ (ವಿನಾಯಿತಿ) ಜೀವನ್ ಲಾಲ್ ಲಾವಿಡಿಯಾ ಹಾಗೂ ಇತರ ನಾಲ್ವರನ್ನು ಸಿಬಿಐ ಹೈದರಾಬಾದ್‌ನಲ್ಲಿ ಬಂಧಿಸಿದೆ.
2004ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ಲಾವಿಡಿಯಾ ಅವರು ಲಂಚ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಸಿಬಿಐಗೆ ಲಭಿಸಿದ್ದು, ಇವರ ವಿರುದ್ಧ ಈಚೆಗಷ್ಟೇ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.




