ಮಲಪ್ಪುರಂ: ಆಟವಾಡುತ್ತಿದ್ದಾಗ ಹಲಸಿನ ಹಣ್ಣು ತಲೆಯ ಮೇಲೆ ಬಿದ್ದು ಒಂಬತ್ತು ವರ್ಷದ ಬಾಲಕಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಮಲಪ್ಪುರಂನ ಕೊಟ್ಟಕ್ಕಲಿಸ್‌ನಲ್ಲಿ ನಡೆದಿದೆ.
ಶನಿವಾರ (ಮೇ 03) ಬೆಳಗ್ಗೆ 9.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೃತ ಬಾಲಕಿಯನ್ನು ಆಯೇಷಾ ಥಸ್ನಿ ಎಂದು ಗುರುತಿಸಲಾಗಿದೆ.ಆಯೇಷಾ, ಚಂಕುವೆಟ್ಟಿ ಮೂಲದ ಕುಂಜಲವಿ ಅವರ ಪುತ್ರಿ.
ಆಯೇಷಾ, ತನ್ನ ಮನೆಯ ಮುಂದೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ದೊಡ್ಡ ಗಾತ್ರದ ಹಲಸಿನ ಹಣ್ಣು ಆಕೆಯ ತಲೆಯ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆಯೇಷಾಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆಕೆಯ ಜೀವವನ್ನು ಉಳಿಸಲಾಗಲಿಲ್ಲ.
ಆಯೇಷಾ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.





