ನವದೆಹಲಿ: ಬ್ಯಾಂಕಾಕ್‌ನಿಂದ ಮಾಸ್ಕೊಗೆ ತೆರಳುತ್ತಿದ್ದ ರಷ್ಯಾ ಮೂಲದ ಏರೋಫ್ಲೋಟ್ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.
SU273 ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಶಂಕೆ ಹಿನ್ನೆಲೆ ದೆಹಲಿಗೆ ಮಾರ್ಗ ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ (ಮಧ್ಯಾಹ್ನ) 3.50ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅದರಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದೂ ಮೂಲಗಳು ಹೇಳಿವೆ.




