ನವದೆಹಲಿ: 2024-25ರ ಆರ್ಥಿಕ ವರ್ಷದಲ್ಲಿ 28.9 ಕೋಟಿ ಟನ್‌ನಷ್ಟು ಕಬ್ಬಿಣದ ಅದಿರು ದೇಶದಲ್ಲಿ ಉತ್ಪಾದನೆ ಆಗಿದೆ ಎಂದು ಕೇಂದ್ರ ಗಣಿ ಸಚಿವಾಲಯ ಸೋಮವಾರ ತಿಳಿಸಿದೆ.
2023-24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 27.7 ಕೋಟಿ ಟನ್‌ನಷ್ಟು ಉತ್ಪಾದನೆಯಾಗಿತ್ತು. ಈ ಉತ್ಪಾದನೆಗೆ ಹೋಲಿಸಿದರೆ ಶೇ 4.3ರಷ್ಟು ಏರಿಕೆಯಾಗಿದೆ.
ಹೆಚ್ಚಿದ ಬೇಡಿಕೆಯಿಂದ ಉತ್ಪಾದನೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಮ್ಯಾಂಗನೀಸ್ ಅದಿರು ಉತ್ಪಾದನೆ 38 ಲಕ್ಷ ಟನ್ ಆಗಿದೆ. ಅಲ್ಯೂಮಿನಿಯಂ 42 ಲಕ್ಷ ಟನ್, ತಾಮ್ರ ಉತ್ಪಾದನೆ 5.73 ಲಕ್ಷ ಟನ್ ಆಗಿದೆ ಎಂದು ತಿಳಿಸಿದೆ.




