ಕರಾಚಿ: ಭಾರತ-ಪಾಕಿಸ್ತಾನ ಉದ್ವಿಗ್ನತೆ ಮುಂದುವರಿದಂತೆ ಪ್ರಮುಖ ವ್ಯಕ್ತಿಗಳು ಪಾಕಿಸ್ತಾನ ತೊರೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದಿಂದ ಭಾರೀ ಹೊಡೆತವನ್ನು ಎದುರಿಸಿದ ನಂತರ, ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯೊಳಗಿನ ಆಂತರಿಕ ಸಂಘರ್ಷ ಮುಂದುವರೆದಿದೆ. ಈ ಪರಿಸ್ಥಿತಿಯಲ್ಲಿ ಜನರು ಪಾಕಿಸ್ತಾನದಿಂದ ಪಲಾಯನ ಮಾಡುತ್ತಿದ್ದಾರೆ.ಪಾಕಿಸ್ತಾನದ ವಿವಿಧ ಸ್ಥಳಗಳಿಂದ ಇಲ್ಲಿಯವರೆಗೆ ಮೂರು ವಿಮಾನಗಳು ಹಾರಾಟ ನಡೆಸಿವೆ ಎಂದು ವರದಿಯಾಗಿದೆ. ಇಸ್ಲಾಮಾಬಾದ್‌ನಿಂದ ಅಬುಧಾಬಿಗೆ, ಲಾಹೋರ್‌ನಿಂದ
ಕ್ವೆಟ್ಟಾ ಮೂಲಕ ಬಹ್ರೇನ್‌ಗೆ ವಿಮಾನವೊಂದು ಹೊರಟಿದೆ ಎಂದು ವರದಿಯಾಗಿದೆ. ಜಮ್ಮು ಮತ್ತು ಪಂಜಾಬ್‌ನಲ್ಲಿ ಪಾಕಿಸ್ತಾನ ತನ್ನ ದಾಳಿಯನ್ನು ತೀವ್ರಗೊಳಿಸಿದ ನಂತರ, ಭಾರತ ಒಂದೇ ಬಾರಿಗೆ ಮೂರು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು.
ಎರಡು ಜೆಎಫ್ -17 ಯುದ್ಧ ವಿಮಾನಗಳು ಮತ್ತು ಒಂದು ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದವು. ಉಧಂಪುರದಲ್ಲಿ ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತ ವಿಫಲಗೊಳಿಸಿತು. ಪಾಕಿಸ್ತಾನವು ಪೂಂಚ್‌ಗೆ ಕಳುಹಿಸಿದ್ದ ಎರಡು ಕಾಮಿಕಾಜ್ ಡ್ರೋನ್‌ಗಳನ್ನು ಭಾರತವು ತಟಸ್ಥಗೊಳಿಸಿತು.
ಅಖ್ನೂರ್‌ನಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು. ಭಾರತವು ಹಲವಾರು ಪಾಕಿಸ್ತಾನಿ ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ನಾಶಪಡಿಸಿತು. ಜಮ್ಮು ನಾಗರಿಕ ವಿಮಾನ ನಿಲ್ದಾಣ, ಸಾಂಬಾ, ಆರ್‌ಎಸ್ ಪುರ, ಅರ್ನಿಯಾ ಮತ್ತು ಹತ್ತಿರದ ಪ್ರದೇಶಗಳ ಮೇಲೆ ಪಾಕಿಸ್ತಾನ ಎಂಟು ಕ್ಷಿಪಣಿಗಳನ್ನು ಹಾರಿಸಿತು.




