ತಿರುವನಂತಪುರಂ: ಪಿಎಸ್‍ಸಿ ಅಧ್ಯಕ್ಷರು ಮತ್ತು ಸದಸ್ಯರ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗಿದೆ.
ಅದನ್ನು ಶೇಕಡಾ 2 ರಷ್ಟು ಹೆಚ್ಚಿಸಲಾಗಿದೆ. 53 ಪ್ರತಿಶತದಿಂದ 55 ಪ್ರತಿಶತಕ್ಕೆ ಇದೀಗ ಏರಿಕೆಯಾಗಿದೆ. ಈ ಹೆಚ್ಚಳವು ಪೂರ್ವಾನ್ವಯವಾಗಿದೆ. ಈ ಪ್ರಯೋಜನ ಜನವರಿ 1 ರಿಂದ ಲಭ್ಯವಿರುತ್ತದೆ.
ಇದರೊಂದಿಗೆ ಅಧ್ಯಕ್ಷರ ವೇತನ 4.10 ಲಕ್ಷ ರೂ.ಗಳಾಗಲಿದೆ. ಸದಸ್ಯರಿಗೆ 4 ಲಕ್ಷ ರೂ.ಗಳು ಲಭಿಸಲಿವೆ.
ಫೆಬ್ರವರಿಯಲ್ಲಿ, ಕೇರಳ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವೇತನ ಮತ್ತು ಸವಲತ್ತುಗಳನ್ನು ಪರಿಷ್ಕರಿಸಲು ಸಂಪುಟ ಸಭೆ ನಿರ್ಧರಿಸಿತ್ತು. ಟೀಕೆಗಳು ಕೇಳಿಬಂದಾಗ ಈ ಶಿಫಾರಸನ್ನು ಮೊದಲೇ ಕೈಬಿಡಲಾಗಿತ್ತು.
ಅಧ್ಯಕ್ಷರ ಪರಿಷ್ಕøತ ವೇತನವು ಜಿಲ್ಲಾ ನ್ಯಾಯಾಧೀಶರ ಸೂಪರ್ ಟೈಮ್ ಸ್ಕೇಲ್‍ನಲ್ಲಿ ಗರಿಷ್ಠ ಮೊತ್ತಕ್ಕೆ ಮತ್ತು ಸದಸ್ಯರಿಗೆ ಜಿಲ್ಲಾ ನ್ಯಾಯಾಧೀಶರ ಆಯ್ಕೆ ದರ್ಜೆಯ ಸ್ಕೇಲ್‍ನಲ್ಲಿ ಗರಿಷ್ಠ ಮೊತ್ತಕ್ಕೆ ಸಮನಾಗಿರುತ್ತದೆ.
ಇತರ ರಾಜ್ಯಗಳಲ್ಲಿ ಪಿಎಸ್‍ಸಿ ಅಧ್ಯಕ್ಷರು ಮತ್ತು ಸದಸ್ಯರ ಅಸ್ತಿತ್ವದಲ್ಲಿರುವ ಸೇವಾ ವೇತನ ವ್ಯವಸ್ಥೆಯನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.





