ಮುಂಬೈ: ದೇಶದಲ್ಲಿಯೇ ಅತಿ ದೊಡ್ಡ ಸಾಮುದಾಯಿಕ ಅಡುಗೆ ಮನೆ ನಿರ್ಮಾಣಕ್ಕಾಗಿ ಇಲ್ಲಿನ ಘೋಡಾಪದೇಯೊ ಪ್ರದೇಶದಲ್ಲಿ ಮುಂಬೈ ಬಂದರು ಪ್ರಾಧಿಕಾರವು 30 ಸಾವಿರ ಚದರ ಅಡಿಯಷ್ಟು ಜಾಗವನ್ನು ಅಕ್ಷರ ಚೈತನ್ಯ ಎಂಬ ಸಂಸ್ಥೆಗೆ ನೀಡಿದೆ.
2027ರ ಹೊತ್ತಿಗೆ ಈ ಅಡುಗೆ ಮನೆಯು ನಿರ್ಮಾಣವಾಗಲಿದ್ದು, ಸುಮಾರು 1 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ.
ಬಾಲವಾಡಿಗಳಲ್ಲಿ ಇರುವ 83 ಸಾವಿರ ಮಕ್ಕಳು, 750ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ, 50ಕ್ಕೂ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನಿತ್ಯ ಊಟ ಉಚಿತವಾಗಿ ದೊರೆಯಲಿದೆ.




