HEALTH TIPS

ಕೊಚ್ಚಿ ಏರ್‌ಪೋರ್ಟ್‌ಲ್ಲಿಯೂ ಟರ್ಕಿ ಕಂಪನಿ ಸೇವೆ ಬಂದ್: ಮುಂದುವರೆದ ವ್ಯಾಪಾರ ಸಮರ

ಕೊಚ್ಚಿ: ಭಾರತ-ಪಾಕ್ ಸೇನಾ ಸಂಘರ್ಷದಲ್ಲಿ ಟರ್ಕಿ, ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಭಾರತದಲ್ಲಿ ಟರ್ಕಿ ವಿರುದ್ಧ ವ್ಯಾಪಕ ಟೀಕೆಗಳು ಎದುರಾಗಿವೆ. ಇದರ ಬೆನ್ನಲ್ಲೇ ಭಾರತದಲ್ಲಿ ಕಾರ್ಯನಿರ್ವಹಣೆಯಲ್ಲಿದ್ದ ಟರ್ಕಿಯ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸುತ್ತಿದೆ.

ಏತನ್ಮಧ್ಯೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CIAL) ವಿಮಾನ ನಿಲ್ದಾಣದ ನಿರ್ವಹಣೆ (ground handling services) ನ ಗುತ್ತಿಗೆ ಪಡೆದಿದ್ದ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಗುತ್ತಿಗೆಯನ್ನು ಸಿಐಎಲ್‌ ರದ್ದು ಮಾಡಿ ಆದೇಶಿದೆ.

ಗುರುವಾರದಿಂದಲೇ ಸೆಲೆಬಿ ಕಂಪನಿ ಸಿಬ್ಬಂದಿಗೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತೆರವು ಮಾಡುವಂತೆ ಆದೇಶಿಸಲಾಗಿದೆ ಎಂದು ಸಿಐಎಲ್‌ ಹೇಳಿದೆ.

ಈ ನಿರ್ಧಾರದಿಂದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಾಗರಿಕ ವಿಮಾನಯಾನ ಭದ್ರತಾ ಘಟಕ (BCAS) ಟರ್ಕಿ ಹಾಗೂ ಅಜರ್‌ಬೈಜಾನ್‌ ಕಂಪನಿಗಳು ಏನಾದರೂ ಯಾವುದೇ ವಿಮಾನ ನಿಲ್ದಾಣದಲ್ಲಿ ಯಾವುದೇ ಸೇವೆ ನೀಡುತ್ತಿದ್ದರೆ ತಕ್ಷಣವೇ ಅವುಗಳ ಸೇವೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.

ಇನ್ನೊಂದೆಡೆ ಶೀಘ್ರವೇ ಭಾರತೀಯರು ಟರ್ಕಿ ಮತ್ತು ಅಜರ್‌ ಬೈಜಾನ್‌ಗೆ ಪ್ರವಾಸ ಕೈಗೊಳ್ಳಬಾರದು ಮತ್ತು ಈ ಎರಡು ದೇಶಗಳಲ್ಲಿ ವಿವಾಹ ಸಮಾರಂಭಗಳನ್ನು ನಡೆಸಬಾರದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಾಗೆಯೇ ಟರ್ಕಿ ವಿರುದ್ಧ ಭಾರತೀಯರು ವ್ಯಾಪಾರ ಸಮರ ಮುಂದುವರೆಸಿದ್ದಾರೆ. ಟರ್ಕಿಯ ವಿಶೇಷ ಸೇಬು ಹಣ್ಣುಗಳನ್ನು, ಒಣಹಣ್ಣುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹಲವೆಡೆ ವ್ಯಾಪಾರಸ್ಥರು ಘೋಷಣೆ ಮಾಡಿದ್ದಾರೆ. ಇದರಿಂದ ಟರ್ಕಿಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಸೇನಾ ಸಂಘರ್ಷದಲ್ಲಿ ಪಾಕ್ ಬೆಂಬಲಿಸಿ ತಪ್ಪು ಮಾಡಲಾಗಿದೆ ಎಂದು ಆ ದೇಶದಲ್ಲಿ ಹಲವರು ಮಾತನಾಡಿಕೊಳ್ಳುತ್ತಿರುವುದಾಗಿ ಕೆಲ ವರದಿಗಳು ಹೇಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries