ತಿರುವನಂತಪುರಂ: ಕಾಂಗ್ರೆಸ್ ತೊರೆದು ಸಿಪಿಎಂ ಸೇರಿದ್ದ ಪಿ. ಸರಿನ್ ಕೆ ಅವರನ್ನು ವಿಜ್ಞಾನ ಕೇರಳ ಕಾರ್ಯಕ್ರಮದ(ಡಿಸ್ಕ್) ಕಾರ್ಯತಂತ್ರದ ಸಲಹೆಗಾರರಾಗಿ ನೇಮಿಸಲಾಗಿದೆ. ಅವರಿಗೆ ಈ ಮೂಲಕ ಮಾಸಿಕ 80,000 ರೂ.ವೇತನ ಲಭಿಸಲಿದೆ.
ಪಾಲಕ್ಕಾಡ್ ಉಪಚುನಾವಣೆಯ ಸಮಯದಲ್ಲಿ ಸರಿನ್ ಕಾಂಗ್ರೆಸ್ ತೊರೆದು ಸಿಪಿಎಂ ಸೇರಿದ್ದರು. ಕೆಪಿಸಿಸಿಯ ಡಿಜಿಟಲ್ ಮಾಧ್ಯಮದ ಉಸ್ತುವಾರಿ ವಹಿಸಿಕೊಂಡಿದ್ದ ಸರಿನ್, ಪಾಲಕ್ಕಾಡ್ ಅಭ್ಯರ್ಥಿತ್ವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಸಿಪಿಎಂ ಸೇರಿದರು. ಆಗ ರಾಹುಲ್ ಮಂಗ್‍ಕೂಟತ್ತಿಲ್ ವಿರುದ್ಧ ಸ್ಪರ್ಧಿಸಿದ್ದರು.





