ತಿರುವನಂತಪುರಂ: ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ದೂರುಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇರಳ ಐಟಿ ಮಿಷನ್ ಸಹಯೋಗದೊಂದಿಗೆ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದೆ.
ಇನ್ನು, ಟೋಲ್-ಫ್ರೀ ಸಂಖ್ಯೆ 1950 ಗೆ ಕರೆ ಮಾಡುವ ಮೂಲಕ, ಚುನಾವಣೆಗಳಿಗೆ ಸಂಬಂಧಿಸಿದ ಅನುಮಾನಗಳು ಮತ್ತು ದೂರುಗಳನ್ನು ಪರಿಹರಿಸಲಾಗುವುದು.
ಈ ಹೊಸ ಉಪಕ್ರಮವು ಪಾರದರ್ಶಕ, ಎಲ್ಲರನ್ನೂ ಒಳಗೊಂಡ ಮತ್ತು ತಂತ್ರಜ್ಞಾನ ಆಧಾರಿತ ಚುನಾವಣೆಗಳನ್ನು ನಡೆಸುವ ಅಭಿಯಾನದ ಭಾಗವಾಗಿದೆ. ಮತದಾರರ ನೋಂದಣಿ, ಮತದಾರರ ಗುರುತಿನ ಚೀಟಿಗಳಲ್ಲಿನ ತಿದ್ದುಪಡಿಗಳು, ಮತಗಟ್ಟೆ ಮಾಹಿತಿ ಮತ್ತು ಚುನಾವಣೆಗೆ ಸಂಬಂಧಿಸಿದ ಇತರ ವಿಚಾರಣೆಗಳಿಗಾಗಿ ನಾಗರಿಕರು ಕಾಲ್ ಸೆಂಟರ್ ಮೂಲಕ ಸಹಾಯ ಪಡೆಯಬಹುದು.
2025ರ ಜೂನ್ 1 ರಿಂದ ಚುನಾವಣಾ ಇಲಾಖೆಯ ಅಧಿಕಾರಿಗಳು ಪ್ರತಿದಿನ ಕಾಲ್ ಸೆಂಟರ್‍ಗೆ ಭೇಟಿ ನೀಡಿ ಕಾಲ್ ಸೆಂಟರ್‍ನ ದೈನಂದಿನ ಕಾರ್ಯಾಚರಣೆಗಳನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಮುಖ್ಯ ಚುನಾವಣಾಧಿಕಾರಿ ಡಾ. ರತನ್ ಯು ಕೇಳ್ಕರ್ ಮಾಹಿತಿ ನೀಡಿದ್ದಾರೆ.


